ಮೂನ್‌ಲೈಟಿಂಗ್ ಎಂಬುದು ಸಂಸ್ಥೆಯ ಮೂಲ ಮೌಲ್ಯಗಳಿಗೆ ವಿರುದ್ಧ: TCS

ದೇಶದ ಐಟಿ ಉದ್ಯಮದಲ್ಲಿ ಭಾರಿ ಸಂಚಲನ ಮೂಡಿಸಿರುವ ಮೂನ್‌ಲೈಟಿಂಗ್ (ಖಾಲಿ ಸಮಯದಲ್ಲಿ ಮತ್ತೊಂದು ಸಂಸ್ಥೆಗಾಗಿ ಕೆಲಸ ಮಾಡುವುದು) ಎಂಬುದು ಸಂಸ್ಥೆಯ ಮೂಲ ಮೌಲ್ಯಗಳಿಗೆ ವಿರುದ್ಧವಾದದ್ದು ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸಂಸ್ಥೆ ಹೇಳಿದೆ.
ಟಿಸಿಎಸ್
ಟಿಸಿಎಸ್

ಬೆಂಗಳೂರು: ದೇಶದ ಐಟಿ ಉದ್ಯಮದಲ್ಲಿ ಭಾರಿ ಸಂಚಲನ ಮೂಡಿಸಿರುವ ಮೂನ್‌ಲೈಟಿಂಗ್ (ಖಾಲಿ ಸಮಯದಲ್ಲಿ ಮತ್ತೊಂದು ಸಂಸ್ಥೆಗಾಗಿ ಕೆಲಸ ಮಾಡುವುದು) ಎಂಬುದು ಸಂಸ್ಥೆಯ ಮೂಲ ಮೌಲ್ಯಗಳಿಗೆ ವಿರುದ್ಧವಾದದ್ದು ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸಂಸ್ಥೆ ಹೇಳಿದೆ.

ಮೂನ್‌ಲೈಟ್ ಅಥವಾ 2ನೇ ಉದ್ಯೋಗವು ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮಿರುವ ಸಮಯದಲ್ಲಿ, ಕಂಪನಿಯ ಎರಡನೇ ತ್ರೈಮಾಸಿಕ (ಕ್ಯೂ 2) ಗಳಿಕೆಯ ಕಾರ್ಯಕ್ರಮದಲ್ಲಿ ಟಿಸಿಎಸ್, ಮೂನ್‌ಲೈಟ್ ಮಾಡುವುದು ನೈತಿಕ ಸಮಸ್ಯೆಯಾಗಿದೆ ಮತ್ತು ಇದು ಕಂಪನಿಯ ಮೂಲ ಮೌಲ್ಯಗಳು ಮತ್ತು ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಈ ಕುರಿತು ಮಾತನಾಡಿರುವ ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಅವರು, "ನಮ್ಮ ಉದ್ಯೋಗ ಒಪ್ಪಂದದಲ್ಲಿ ಅವರು (ಉದ್ಯೋಗಿಗಳು) ಬೇರೆ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಲು ಅನುಮತಿಸುವುದಿಲ್ಲ ಎಂದು ಹೇಳಿದರು. ಇದೇ ವಿಚಾರವಾಗಿ ಮಾತನಾಡಿದ ಟಿಸಿಎಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಾಡ್ ಅವರು, 'ಉದ್ಯೋಗಿಗಳಿಗೆ ಮೂನ್‌ಲೈಟ್‌ನಲ್ಲಿ ಕಂಪನಿಯ ಸ್ಥಾನದ ಬಗ್ಗೆ ತಿಳಿಸಿದ್ದೇವೆ. ಇಲ್ಲಿಯವರೆಗೂ ನೌಕರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ವಿಪ್ರೋ ಇತ್ತೀಚೆಗೆ ಮೂನ್‌ಲೈಟ್‌ಗಾಗಿ 300 ಉದ್ಯೋಗಿಗಳನ್ನು ವಜಾಗೊಳಿಸಿದೆ ಮತ್ತು ಇನ್ಫೋಸಿಸ್ ಕೂಡ ತನ್ನ ಉದ್ಯೋಗಿಗಳಿಗೆ ದ್ವಿ ಉದ್ಯೋಗದ ವಿರುದ್ಧ ಎಚ್ಚರಿಕೆ ನೀಡಿದೆ. ಎಲ್ಲಾ ಹಿರಿಯರು ಈಗಾಗಲೇ ಕಚೇರಿಯಿಂದ ಕೆಲಸ ಮಾಡುತ್ತಿದ್ದಾರೆ. ಉಳಿದ ಸಿಬ್ಬಂದಿಯನ್ನು ವಾಸ್ತವವಾಗಿ ನಾವು ಯೋಜನೆಗಳಾದ್ಯಂತ ಪಟ್ಟಿ ಮಾಡುತ್ತಿದ್ದೇವೆ. ಇಂದು ವಾರಕ್ಕೆ ಎರಡು ಬಾರಿಯಾದರೂ ಮೂರನೇ ಒಂದು ಭಾಗದಷ್ಟು ಮಂದಿ ಕಚೇರಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ ಎಂದು ಲಕ್ಕಾಡ್ ಹೇಳಿದರು.

ಈ ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲಿ 35,000 ಫ್ರೆಶರ್‌ಗಳನ್ನು ನೇಮಕ ಮಾಡಿಕೊಂಡಿರುವ ಮಾಡಿರುವ TCS, ತಾನು ಮಾಡಿದ ಎಲ್ಲಾ ಉದ್ಯೋಗ ಕೊಡುಗೆಗಳನ್ನು ಗೌರವಿಸಿದೆ ಎಂದು ಹೇಳಿದೆ. ಎರಡನೇ ತ್ರೈಮಾಸಿಕದಲ್ಲಿ ಇದರ ನಿವ್ವಳ ಸೇರ್ಪಡೆ 9,840 ಉದ್ಯೋಗಿಗಳು. ಮುಂಬರುವ ಎರಡು ತ್ರೈಮಾಸಿಕಗಳಲ್ಲಿ ಕಂಪನಿಯು 10,000-12,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com