ಚಿನ್ನ ಖರೀದಿಸುವ ಮುನ್ನ ಗಮನಿಸಿ: ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಇಂತಿದೆ!

ಮಹಿಳೆಯರ ಅಚ್ಚುಮೆಚ್ಚಿನ ಹಳದಿ ಲೋಹ ಚಿನ್ನ ಸತತ ಮೂರನೇ ದಿನವೂ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಮಂಗಳವಾರವೂ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹಿಳೆಯರ ಅಚ್ಚುಮೆಚ್ಚಿನ ಹಳದಿ ಲೋಹ ಚಿನ್ನ ಸತತ ಮೂರನೇ ದಿನವೂ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಮಂಗಳವಾರವೂ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಡಿಸೆಂಬರ್ 16 ಅಂದರೆ ಕಳೆದ ಶನಿವಾರ 376 ರೂಗಳಷ್ಟು ದರ ಕಡಿತವಾಗಿದ್ದ ಚಿನ್ನ ಬಳಿಕ ಸತತ ಮೂರನೇ ದಿನವೂ ಯಾವುದೇ ದರ ಬದಲಾವಣೆ ಇಲ್ಲದೆ ವಹಿವಾಟು ಮುಂದುವರೆಸಿದೆ. 22 ಕ್ಯಾರಟ್‌ ಮತ್ತು 24 ಕ್ಯಾರಟ್ ಚಿನ್ನದ ಬೆಲೆಗಳು (Gold Rate Today) ಮಂಗಳವಾರ ಯಥಾಸ್ಥಿತಿ ಕಾಪಾಡಿಕೊಂಡಿವೆ.

ಬೆಂಗಳೂರಿನಲ್ಲಿ ಇಂದು ನೀವು ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು 5,740 ರೂ.ಗೆ ಖರೀದಿಸಬಹುದಾಗಿದ್ದು, ಎಂಟು ಗ್ರಾಂ ಚಿನ್ನದ ಬೆಲೆ 45,920 ರೂ. ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು 57,400 ಮತ್ತು 5,74,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 6,262 ಆಗಿದ್ದರೆ, ಎಂಟು ಗ್ರಾಂ ಬೆಲೆ 50,096 ರೂ ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ 62,620 ರೂ ಮತ್ತು 6,26,200 ರೂ ವೆಚ್ಚವಾಗಲಿದೆ.

ಇದೇ ಡಿಸೆಂಬರ್ ತಿಂಗಳಲ್ಲಿ ಚಿನ್ನ ಗರಿಷ್ಠ ಮಟ್ಟ ತಲುಪಿತ್ತು. ಡಿಸೆಂಬರ್ 15ರಂದು ತಿಂಗಳ ಗರಿಷ್ಟ ಮಟ್ಟ ಅಂದರೆ 6,311ರೂ ಗೆ ತಲುಪಿತ್ತು. ಇದೇ ತಿಂಗಳ ಕನಿಷ್ಠ ಮೊತ್ತ ಎಂದರೆ ಡಿಸೆಂಬರ್ 1ರಂದು 6,295 ರೂನಷ್ಟಿತ್ತು.

ಉಳಿದಂತೆ ಬೆಳ್ಳಿ ಬೆಲೆಯಲ್ಲೂ ಕೂಡ ಅಂತಹ ಗಮನಾರ್ಹ ಬದಲಾವಣೆ ಆಗಿಲ್ಲ. ಪ್ರತೀ ಗ್ರಾಂ ಬೆಳ್ಳಿ 76 ರೂಗಳಷ್ಟಿದ್ದು, ಎಂಟು ಗ್ರಾಂ ಬೆಳ್ಳಿ 608 ರೂ ಮತ್ತು 10 ಗ್ರಾಂ ಬೆಳ್ಳಿ 760ರಷ್ಟಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com