ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ ಏರಿಕೆ: ಎಷ್ಟಿದೆ? ಇಲ್ಲಿದೆ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ ವೈ) ಯೋಜನೆಯ ಬಡ್ಡಿ ದರವನ್ನು ಏರಿಕೆ ಮಾಡಿದೆ. 
ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ ವೈ) ಯೋಜನೆಯ ಬಡ್ಡಿ ದರವನ್ನು ಏರಿಕೆ ಮಾಡಿದೆ.

ಹಣಕಾಸು ಸಚಿವಾಲಯದ ಸುತ್ತೋಲೆಯ ಪ್ರಕಾರ, ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿಗೆ ಶೇ.8.2 ರಷ್ಟು ಬಡ್ಡಿ ದರ ಇರಲಿದೆ. ಈ ಹಿಂದೆ ಶೇ.8 ರಷ್ಟು ಬಡ್ಡಿ ನೀಡಲಾಗುತ್ತಿತ್ತು. 

ಮುಖ್ಯವಾಗಿ ಅಂಚೆ ಕಚೇರಿಗಳಿಂದ ನಿರ್ವಹಿಸಲ್ಪಡುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ತಿಳಿಸುತ್ತದೆ.

ಎಸ್ಎಸ್ ವೈ ನ ಪ್ರಯೋಜನಗಳು 

  • ಸರ್ಕಾರಿ ಬೆಂಬಲಿತ ಯೋಜನೆ ಇದಾಗಿದ್ದು, ಖಾತರಿ ಆದಾಯವನ್ನು ನೀಡುತ್ತದೆ.
  • ಎಸ್ಎಸ್ ವೈ ಖಾತೆಯಡಿಯಲ್ಲಿ 1.50 ಲಕ್ಷ ರೂಪಾಯಿಗಳವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿಯನ್ನು ಐಟಿ ಕಾಯ್ದೆಯ 80 ಸಿ ಅಡಿಯಲ್ಲಿ ಪಡೆಯಬಹುದಾಗಿದೆ. 
  • ಸುಕನ್ಯಾ ಸಮೃದ್ಧಿ ಯೋಜನೆಯಡಿ ಇಡಲಾದ ಬಡ್ಡಿ ತೆರಿಗೆ ಮುಕ್ತವಾಗಿರಲಿದೆ. 
  • ಸುಕನ್ಯಾ ಸಮೃದ್ಧಿ ಯೋಜನೆಯಡಿ ಒಂದು ಖಾತೆಗೆ ಒಂದು ವರ್ಷಕ್ಕೆ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದಾಗಿದೆ.
  • ಸುಕನ್ಯಾ ಸಮೃದ್ಧಿ ಖಾತೆಯಿಂದ ಹಿಂತೆಗೆತ ಹಾಗೂ ಮೆಚ್ಯುರಿಟಿ ನಿಯಮಗಳು ಇಂತಿವೆ. 
  • ಹೆಣ್ಣುಮಗುವೊಂದು 18 ವರ್ಷ ದಾಟುತ್ತಿದ್ದಂತೆಯೇ ಆ ಮಗುವಿನ ಪೋಷಕರು ಆರ್ಥಿಕ ವರ್ಷದಲ್ಲಿ ಉಳಿದಿರುವ ಶೇ.50 ರಷ್ಟು ಹಣವನ್ನು ಖಾತೆಯಿಂದ ತೆಗೆಯಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com