ಮಾರುಕಟ್ಟೆ ಬಂಡವಾಳೀಕರಣ: ಟಾಪ್-10 ಪೈಕಿ 7 ಸಂಸ್ಥೆಗಳ 2.16 ಲಕ್ಷ ಕೋಟಿ ರೂ. ನಷ್ಟ, ಆರ್‌ಐಎಲ್, ಎಸ್‌ಬಿಐಗೆ ಭಾರಿ ಹೊಡೆತ!

ಮಾರುಕಟ್ಟೆ ಬಂಡವಾಳೀಕರಣ ಪ್ರಕ್ರಿಯೆಯಲ್ಲಿ ದೇಶದ ಟಾಪ್ 10 ಪ್ರಮುಖ ಸಂಸ್ಥೆಗಳ ಪೈಕಿ 7 ಸಂಸ್ಥೆಗಳ ಸುಮಾರು 2.16 ಲಕ್ಷ ಕೋಟಿ ರೂ. ನಷ್ಟವಾಗಿದ್ದು, ಈ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಎಸ್ ಬಿಐ ಗೆ ಭಾರಿ ಹೊಡೆತ ಬಿದ್ದಿದೆ ಎಂದು ಅಂದಾಜಿಸಲಾಗಿದೆ.
ಷೇರುಮಾರುಕಟ್ಟೆ
ಷೇರುಮಾರುಕಟ್ಟೆ

ಮುಂಬೈ: ಮಾರುಕಟ್ಟೆ ಬಂಡವಾಳೀಕರಣ ಪ್ರಕ್ರಿಯೆಯಲ್ಲಿ ದೇಶದ ಟಾಪ್ 10 ಪ್ರಮುಖ ಸಂಸ್ಥೆಗಳ ಪೈಕಿ 7 ಸಂಸ್ಥೆಗಳ ಸುಮಾರು 2.16 ಲಕ್ಷ ಕೋಟಿ ರೂ. ನಷ್ಟವಾಗಿದ್ದು, ಈ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಎಸ್ ಬಿಐ ಗೆ ಭಾರಿ ಹೊಡೆತ ಬಿದ್ದಿದೆ ಎಂದು ಅಂದಾಜಿಸಲಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅತಿ ಹೆಚ್ಚು ಹೊಡೆತಕ್ಕೊಳಗಾಗುವುದರೊಂದಿಗೆ ದೇಶದ 10 ಅತ್ಯಂತ ಮೌಲ್ಯಯುತ ಸಂಸ್ಥೆಗಳ ಪೈಕಿ ಏಳು ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯದಲ್ಲಿ ಕಳೆದ ವಾರ 2,16,092.54 ಕೋಟಿ ರೂ. ಕುಸಿತವಾಗಿದೆ.

ಕಳೆದ ವಾರ, ಬಿಎಸ್‌ಇ ಸೆನ್ಸೆಕ್ಸ್ 1,290.87 ಪಾಯಿಂಟ್‌ಗಳು ಅಥವಾ 2.12 ಶೇಕಡಾ ಕುಸಿಯಿತು. ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಭಾರ್ತಿ ಏರ್‌ಟೆಲ್ ಟಾಪ್-10 ಸಂಸ್ಥೆಗಳಲ್ಲಿ ವಹಿವಾಟಿನಲ್ಲಿ ಹಿಂದುಳಿದಿದ್ದವು, ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಮತ್ತು ಐಟಿಸಿ ಸಂಸ್ಥೆಗಳ ಷೇರುಗಳು ಲಾಭಾಂಶ ಕಾಣುವ ಮೂಲಕ ವಿಜೇತರಾಗಿ ಹೊರಹೊಮ್ಮಿದವು.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಮಾರುಕಟ್ಟೆ ಮೌಲ್ಯವು 71,003.2 ಕೋಟಿ ರೂಪಾಯಿಗಳಿಂದ 15,81,601.11 ಕೋಟಿ ರೂಪಾಯಿಗಳಿಗೆ ಕುಸಿದಿದೆ, ಇದು ಟಾಪ್ 10 ಸಂಸ್ಥೆಗಳಲ್ಲಿ ಅತ್ಯಂತ ಹೆಚ್ಚು ಎನ್ನಲಾಗಿದೆ. ಅಂತೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೌಲ್ಯವು 46,318.73 ಕೋಟಿ ರೂ.ಗೆ ಕುಸಿದು 4,82,107.53 ಕೋಟಿ ರೂಗೆ ತಲುಪಿದೆ.

ಐಸಿಐಸಿಐ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ ಕೂಡ 36,836.03 ಕೋಟಿ ರೂ.ನಷ್ಟು ಕುಸಿದು 5,70,509.34 ಕೋಟಿ ರೂಗೆ ತಲುಪಿದೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮೌಲ್ಯವು 24,899.93 ಕೋಟಿ ರೂ.ನಿಂದ 9,01,287.61 ಕೋಟಿ ರೂ.ಗೆ, ಭಾರ್ತಿ ಏರ್‌ಟೆಲ್‌ನ ಮೌಲ್ಯವು ರೂ.23,747.55 ಕೋಟಿಯಿಂದ ರೂ.4,31,583.22 ಕೋಟಿಗೆ ಕುಸಿದಿದೆ.

ಎಚ್‌ಡಿಎಫ್‌ಸಿಯ ಮಾರುಕಟ್ಟೆ ಬಂಡವಾಳೀಕರಣವು (ಎಂಕ್ಯಾಪ್) ರೂ 10,257.28 ಕೋಟಿಯಿಂದ ರೂ 4,85,809.79 ಕೋಟಿಗೆ ಇಳಿದಿದೆ ಮತ್ತು ಇನ್ಫೋಸಿಸ್ ರೂ 3,029.82 ಕೋಟಿ ಕುಸಿದು ರೂ 6,38,891.87 ಕೋಟಿಗೆ ತಲುಪಿದೆ.

ಆದಾಗ್ಯೂ, ಟಿಸಿಎಸ್ 17,837.88 ಕೋಟಿ ರೂಪಾಯಿಗಳನ್ನು ಸೇರಿಸಿದ್ದು, ಅದರ ಮೌಲ್ಯ 12,47,882.88 ಕೋಟಿ ರೂಗೆ ಏರಿಗೆಯಾಗಿದೆ.

ಹಿಂದುಸ್ತಾನ್ ಯೂನಿಲಿವರ್‌ನ ಎಮ್‌ಕ್ಯಾಪ್ 14,931.65 ಕೋಟಿ ರೂ.ನಷ್ಚು ಜಿಗಿದು 6,13,689.74 ಕೋಟಿ ರೂ.ಗೆ ಮತ್ತು ಐಟಿಸಿಯ 13,591.48 ಕೋಟಿ ರೂ.ಗೆ ಏರಿಕೆಯಾಗಿ ರೂ.4,29,031.46 ಕೋಟಿ ರೂಗೆ ತಲುಪಿದೆ.

ಟಾಪ್-10 ಸಂಸ್ಥೆಗಳ ಶ್ರೇಯಾಂಕದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಉಳಿದಿದೆ, ನಂತರ TCS, HDFC ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ICICI ಬ್ಯಾಂಕ್, HDFC, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಏರ್ಟೆಲ್ ಮತ್ತು ITC ಸಂಸ್ಥೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com