ಅಂದಾಜಿಗಿಂತ 2 ವರ್ಷ ಮೊದಲೇ, 2027ರ ವೇಳೆಗೆ ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: SBI ಸಂಶೋಧನೆ

ಈ ಹಿಂದಿನ ಅಂದಾಜಿಗಿಂತ 2 ವರ್ಷ ಮೊದಲೇ ಅಂದರೇ 2027ರ ವೇಳೆಗೆ ಭಾರತವು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸಂಶೋಧನಾ ವರದಿಯಲ್ಲಿ ತಿಳಿಸಿದೆ.
3ನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಭಾರತ
3ನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಭಾರತ

ನವದೆಹಲಿ: ಈ ಹಿಂದಿನ ಅಂದಾಜಿಗಿಂತ 2 ವರ್ಷ ಮೊದಲೇ ಅಂದರೇ 2027ರ ವೇಳೆಗೆ ಭಾರತವು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸಂಶೋಧನಾ ವರದಿಯಲ್ಲಿ ತಿಳಿಸಿದೆ.

ಭಾರತವು ಈಗಿರುವ ಪ್ರಸ್ತುತ ಬೆಳವಣಿಗೆಯ ದರವನ್ನು ಉತ್ತಮವಾಗಿ ನಿರ್ವಹಿಸಿದರೆ 2027ರಲ್ಲಿ (2027-28) 3ನೇ ಅತಿದೊಡ್ಡ ಆರ್ಥಿಕತೆ ಟ್ಯಾಗ್ ಪಡೆಯುವ ಸಾಧ್ಯತೆಯಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಜಪಾನ್ ಮತ್ತು ಜರ್ಮನಿ ಎರಡನ್ನೂ ಮೀರಿಸುತ್ತದೆ ಎಂದು ಎಸ್‌ಬಿಐ ರಿಸರ್ಚ್ ತನ್ನ ‘ಇಕೋವ್ರಾಪ್’ ವರದಿಯಲ್ಲಿ ತಿಳಿಸಿದೆ.

ಈ ಹಿಂದೆ, 2029 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಎಸ್‌ಬಿಐ ಸಂಶೋಧನೆ ನಿರೀಕ್ಷಿಸಿತ್ತು. ಆದರೆ ನೂತನ ವರದಿಯಲ್ಲಿ ಭಾರತ ನಿಗಧಿತ ಸಮಯಕ್ಕಿಂತ 2 ವರ್ಷ ಮೊದಲೇ ಅಂದರೆ 2027ರ ವೇಳೆಗೆ ಭಾರತವು ಮೂರನೇ ಸ್ಥಾನಕ್ಕೇರಲಿದೆ. ಇದು 2014 ರಲ್ಲಿದ್ದಕ್ಕಿಂತ ಏಳು ಸ್ಥಾನಗಳ ಮೇಲಕ್ಕೆ ಚಲಿಸುತ್ತದೆ. ಕುತೂಹಲಕಾರಿಯಾಗಿ, 2022-2027 ರ ನಡುವೆ ಭಾರತದಿಂದ ಹೆಚ್ಚುತ್ತಿರುವ ಹೆಚ್ಚಳವು ಆಸ್ಟ್ರೇಲಿಯಾದ ಆರ್ಥಿಕತೆಯ ಪ್ರಸ್ತುತ ಗಾತ್ರದ 1.8 ಟ್ರಿಲಿಯನ್ ಅಮೆರಿಕನ್ ಡಾಲರ್ ಗಿಂತ ಹೆಚ್ಚಾಗಿರುತ್ತದೆ ಎಂದು ವರದಿ ಹೇಳಿದೆ.

"ಹಾಲಿ ಇರುವ ಉತ್ತಮ ದರದಲ್ಲಿ ಮುಂದುವರೆದರೆ, ಭಾರತವು ಇನ್ನೆರಡು ವರ್ಷಗಳಲ್ಲಿ ತನ್ನ ಆರ್ಥಿಕತೆಗೆ  0.75 ಟ್ರಿಲಿಯನ್ ಡಾಲರ್ ಅನ್ನು ಸೇರಿಸುವ ಸಾಧ್ಯತೆಯಿದೆ. ಅಂತೆಯೇ ಭಾರತವು 2047 ರ ವೇಳೆಗೆ ಆರ್ಥಿಕತೆದೆ 20 ಟ್ರಿಲಿಯನ್ ಡಾಲರ್ ಗುರಿಯನ್ನು ಮುಟ್ಟಲು ಸಿದ್ಧವಾಗಿದೆ ಎಂದು ವರದಿ ಹೇಳಿದೆ. GDP ಯಲ್ಲಿ ಭಾರತದ ಜಾಗತಿಕ ಪಾಲು 2027ರ ವೇಳೆಗೆ ಶೇ.4 ದಾಟಲಿದೆ. ಭಾರತದ GDPಯ ಪಾಲು ಈಗ 3.5 ಪ್ರತಿಶತದಷ್ಟಿದ್ದು, ಇದೇ ಸಂಖ್ಯೆ 2014 ರಲ್ಲಿ ಶೇಕಡಾ 2.6 ರಷ್ಟಿತ್ತು ಮತ್ತು 2027 ರಲ್ಲಿ 4 ಶೇಕಡಾವನ್ನು ತಲುಪುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯವಾರು, ಎಸ್‌ಬಿಐ ಸಂಶೋಧನೆಯು ಅಂದಾಜಿನ ಪ್ರಕಾರ ಕನಿಷ್ಠ ಎರಡು ಭಾರತದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳು ಆರ್ಥಿಕತೆಯ ವಿಷಯದಲ್ಲಿ ಭಾರತವು ಜಾಗತಿಕ ಆರ್ಥಿಕತೆಯಲ್ಲಿ 3ನೇ ಸ್ಥಾನವನ್ನು ಸಾಧಿಸುವಾಗ 2027 ರಲ್ಲಿ USD 500 ಶತಕೋಟಿ ಗುರಿಯನ್ನು ಮುಟ್ಟುತ್ತವೆ. 2027 ರಲ್ಲಿ ಪ್ರಮುಖ ಭಾರತೀಯ ರಾಜ್ಯಗಳ ಜಿಡಿಪಿ ಗಾತ್ರವು ವಿಯೆಟ್ನಾಂ, ನಾರ್ವೆ ಮುಂತಾದ ಕೆಲವು ಏಷ್ಯಾ ಮತ್ತು ಯುರೋಪಿಯನ್ ರಾಷ್ಟ್ರಗಳ ಗಾತ್ರಕ್ಕಿಂತ ಹೆಚ್ಚಾಗಿರುತ್ತದೆ" ಎಂದು ವರದಿಯಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com