2023-24ರಲ್ಲಿ ಭಾರತ ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ: IMF ವರದಿ

ಹಾಲಿ ಜಾಗತಿಕ ಆರ್ಥಿಕ ಹಿನ್ನಡೆಯ ಪರಿಸ್ಥಿತಿಯಲ್ಲೂ ಆಶಾದಾಯಕ ನಿರ್ವಹಣೆ ತೋರುತ್ತಿರುವ ಭಾರತ 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ(GDP) ಬೆಳವಣಿಗೆಯಲ್ಲಿ ಅಗ್ರ ಸ್ಥಾನಿಯಾಗಿರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವರದಿಯೊಂದು ಹೇಳಿದೆ.
ಭಾರತದ ಜಿಡಿಪಿ
ಭಾರತದ ಜಿಡಿಪಿ
Updated on

ನವದೆಹಲಿ: ಹಾಲಿ ಜಾಗತಿಕ ಆರ್ಥಿಕ ಹಿನ್ನಡೆಯ ಪರಿಸ್ಥಿತಿಯಲ್ಲೂ ಆಶಾದಾಯಕ ನಿರ್ವಹಣೆ ತೋರುತ್ತಿರುವ ಭಾರತ 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ(GDP) ಬೆಳವಣಿಗೆಯಲ್ಲಿ ಅಗ್ರ ಸ್ಥಾನಿಯಾಗಿರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವರದಿಯೊಂದು ಹೇಳಿದೆ.

2023-24ರ ಹಣಕಾಸು ವರ್ಷದಲ್ಲಿ ಭಾರತವು ಚೀನಾ ಮತ್ತು ಅಮೆರಿಕದತಹ ಪ್ರಮುಖ ಮತ್ತು ದೈತ್ಯ ಆರ್ಥಿಕತೆಗಳನ್ನು ಮೀರಿಸುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ತನ್ನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ವರದಿಯಲ್ಲಿ ಭವಿಷ್ಯ ನುಡಿದಿದೆ. ಐಎಂಎಫ್ ವರ್ಲ್ಡ್ ಎಕನಾಮಿಕ್ ಔಟ್ ಲುಕ್ ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಅಥವಾ ಭಾರತದ ಜಿಡಿಪಿ ಶೇ.5.9ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಪ್ರಮುಖ ರಾಷ್ಟ್ರಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಚೀನಾ, ಯುನೈಟೆಡ್ ಸ್ಟೇಟ್ಸ್ (ಅಮೆರಿಕ), ಯುಕೆ (ಬ್ರಿಟನ್), ಫ್ರಾನ್ಸ್, ಜರ್ಮನಿ, ಸೌದಿ ಅರೇಬಿಯಾ ಮತ್ತು ಕೆನಡಾವನ್ನು ಮೀರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶ್ವದ GDP ಮುನ್ಸೂಚನೆ 2023 ರ ಪ್ರಮುಖ ರಾಷ್ಟ್ರಗಳ ಪಟ್ಟಿಯಲ್ಲಿ, ಭಾರತವು 5.9 ಪ್ರತಿಶತ ನಿರೀಕ್ಷಿತ ಬೆಳವಣಿಗೆಯೊಂದಿಗೆ ಮೊದಲ ಸ್ಥಾನದಲ್ಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು 5.9% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದು ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. IMF ನ ದ್ವೈವಾರ್ಷಿಕ ವರದಿಯ ಪ್ರಕಾರ, ಭಾರತದ ಮುಖ್ಯ ಚಿಲ್ಲರೆ ಹಣದುಬ್ಬರವು ಹಿಂದಿನ ವರ್ಷದಲ್ಲಿ 6.7% ರಿಂದ 2023-24 ರಲ್ಲಿ 4.9% ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. ಆರ್ಥಿಕತೆಯಲ್ಲಿ ಭಾರತದ ಶಕ್ತಿ ಮತ್ತು ಯಾವುದೇ ಸವಾಲನ್ನು ಜಯಿಸುವ ನಿರಂತರ ಇಚ್ಛೆಗೆ ಇದು ಒಂದು ಜ್ವಲಂತ ಉದಾಹರಣೆಯಾಗಿದೆ.

2023 ರಲ್ಲಿ, ಅಮೇರಿಕ ಆರ್ಥಿಕತೆಯು 1.6 ಪ್ರತಿಶತದಷ್ಟು ವಿಸ್ತರಿಸುತ್ತದೆ ಎಂದು ಅಂದಾಜಿಸಲಾಗಿದೆ, ಇದು IMF ನ ಹಿಂದಿನ ಭವಿಷ್ಯಕ್ಕಿಂತ 0.2 ಶೇಕಡಾ ಪಾಯಿಂಟ್‌ಗಳು ಹೆಚ್ಚು. ಮುಂದಿನ ವರ್ಷ, ಅಮೆರಿಕ GDP ಈ ಜನವರಿಯಿಂದ 0.1 ಶೇಕಡಾವಾರು ಕುಸಿತದೊದಿಗೆ 1.1ರಷ್ಟಕ್ಕೆ ಕುಸಿಯುತ್ತದೆ ಎಂದು ಮುನ್ಸೂಚನೆ ನೀಡಿದೆ. ಅಂತೆಯೇ ಐಎಂಎಫ್ ಈ ವರ್ಷ ಚೀನಾಕ್ಕೆ ತನ್ನ GDP ಮುನ್ಸೂಚನೆಯನ್ನು 5.2% ನಲ್ಲಿ ಇರಿಸಿದೆ. ಕೋವಿಡ್ ನಂತರದ ಚೀನಾದ ಆರ್ಥಿಕತೆ ಧನಾತ್ಮಕವಾಗಿದೆಯಾದರೂ ಅದು ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com