
ಮುಂಬೈ: ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಕೂಡ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ್ದು, ಇಂದು ಸೆನ್ಸೆಕ್ಸ್ 231 ಅಂಕಗಳ ಏರಿಕೆ ಕಂಡಿದೆ.
ಇಂದು ಸೆನ್ಸೆಕ್ಸ್ ಸಕಾರಾತ್ಮಕ ವಹಿವಾಟು ನಡೆಸಿದ್ದು, ದಿನದ ವಹಿವಾಟು ಆರಂಭದಲ್ಲೇ 502.42 ಅಂಕಗಳ ಏರಿಕೆಯೊಂದಿಗೆ ದಾಖಲೆಯ 82,637.03 ಅಂಕಗಳಿಗೆ ಏರಿಕೆಯಾಗಿತ್ತು.
ನಿಫ್ಚಿ ಕೂಡ ಆರಂಭಿಕ ವಹಿವಾಟಿನಲ್ಲಿ 116.4 ಅಂಕಗಳ ಏರಿಕೆಯೊಂದಿಗೆ 25,268.35 ಅಂಕಗಳಿಗೆ ಏರಿಕೆಯಾಗಿತ್ತು. ಆದರೆ ದಿನದ ಅಂತ್ಯದ ವೇಳೆ ನಿಫ್ಟಿ 83.95 ಅಂಕಗಳ ಏರಿಕೆಯೊಂದಿಗೆ ದಾಖಲೆಯ 25,235.90 ಅಂಕಗಳೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
Advertisement