
ಮುಂಬೈ: ಕೇಂದ್ರ ಬಜೆಟ್ ಮಂಡನೆ ಬಳಿಕ ಮಂಕಾಗಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು (ಶುಕ್ರವಾರ) ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ಲಾಭವಾಗಿದೆ.
ಹೌದು.. ಕೇಂದ್ರ ಬಜೆಟ್ (Union Budget 2024) ಮಂಡಿಸಿದ ಜುಲೈ 23ರ ನಂತರ ಸತತವಾಗಿ ಇಳಿಕೆ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆಯು (Stock Market) ಶುಕ್ರವಾರ (ಜುಲೈ 26) ಭಾರಿ ಸುಧಾರಣೆ ಕಂಡಿದೆ.
ಷೇರುಪೇಟೆಯಲ್ಲಿ ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್ 1,292.92 ಪಾಯಿಂಟ್‌ಗಳ ಏರಿಕೆ ಕಂಡರೆ, ಎನ್‌ಎಸ್‌ಇ ನಿಫ್ಟಿಯು 428.75 ಅಂಕಗಳಷ್ಟು ಏರಿಕೆಯಾಗಿದೆ. ಇದರಿಂದಾಗಿ ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ರೂ. ಲಾಭವಾಗಿದೆ.
BSE ಸೆನ್ಸೆಕ್ಸ್ 1,292.92 ಪಾಯಿಂಟ್‌ಗಳ ಏರಿಕೆಯೊಂದಿಗೆ 81,332.72 ಅಂಕಗಳ ಮಟ್ಟ ತಲುಪಿದರೆ, NSE ನಿಫ್ಟಿಯು 428.75 ಪಾಯಿಂಟ್‌ಗಳ ಏರಿಕೆಯೊಂದಿಗೆ 24,834.85 ಅಂಕಗಳಿಗೆ ಏರಿಕೆಯಾಗಿದೆ. ಇದರಿಂದಾಗಿ, ಕಳೆದ ನಾಲ್ಕು ದಿನಗಳಿಂದ ನಷ್ಟ ಅನುಭವಿಸಿದ್ದ ಹೂಡಿಕೆದಾರರು ಶುಕ್ರವಾರ ಭರ್ಜರಿ ಲಾಭ ಗಳಿಸಿದಂತಾಗಿದೆ. ಇಂದಿನ ವಹಿವಾಟಿನಲ್ಲಿ ಎಲ್ಲ ವಿಭಾಗದ ಷೇರುಗಳು ಲಾಭದೊಂದಿಗೆ ವಹಿವಾಟು ಮುಕ್ತಾಯಗೊಳಿಸಿರುವುದು ವಿಶೇಷವಾಗಿದೆ.
ಈ ಬಗ್ಗೆ ಮಾತನಾಡಿರುವ ರಿಲಿಗೇರ್ ಬ್ರೋಕಿಂಗ್ ಸಂಶೋಧನಾ ವಿಭಾಗದ ಮುಖ್ಯಸ್ಥ ಅಜಿತ್ ಮಿಶ್ರಾ, 'ಐಟಿ ಮತ್ತು ಮೆಟಲ್ ಷೇರುಗಳಲ್ಲಿನ ದೃಢವಾದ ವಹಿವಾಟು ಇಂದಿನ ಸಕಾರಾತ್ಮಕ ಷೇರು ವಹಿವಾಟಿಗೆ ನೆರವಾಯಿತು. ಅಂತೆಯೇ ಆಗಸ್ಟ್ ತಿಂಗಳ ಆರಂಭಕ್ಕೆ ಸಕಾರಾತ್ಮಕ ಅಂಶಗಳನ್ನು ಪೂರೈಸಿದೆ.
ಹೆಚ್ಚಿನ ಪ್ರಮಾಣದ ಷೇರು ಸೂಚ್ಯಂಕಗಳು ಮಾರುಕಟ್ಟೆಯ ಶಕ್ತಿ ಮತ್ತು ಗಣನೀಯ ಲಾಭಾಂಶಗಳನ್ನು ಪ್ರತಿಬಿಂಬಿಸುತ್ತದೆ. ಪ್ರಸ್ತುತ ಪ್ರವೃತ್ತಿಯು ಗೂಳಿ ವಹಿವಾಟು ನಿಯಂತ್ರಣದಲ್ಲಿದೆ ಎಂದು ಸೂಚಿಸುತ್ತದೆ. ನಾವು ಮುಂಬರುವ ಸೆಷನ್‌ಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವ ಸಾಧ್ಯತೆಯಿದೆ. ಆದಾಗ್ಯೂ, ಸೂಚ್ಯಂಕ ಬಿಗ್ ಮತ್ತು ಮಿಡ್‌ಕ್ಯಾಪ್‌ಗಳ ಮೇಲೆ ಕೇಂದ್ರೀಕರಿಸಲು ಸಲಹೆ ನೀಡಲಾಗುತ್ತದೆ" ಎಂದು ಹೇಳಿದರು.
ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಮಾತನಾಡಿ, ಮುಂದಿನ ತಿಂಗಳ ಅವಧಿಯ ಆರಂಭದಲ್ಲಿ ದೇಶೀಯ ಮಾರುಕಟ್ಟೆಯು ಗಣನೀಯವಾಗಿ ಚೇತರಿಕೆ ಕಾಣವು ನಿರೀಕ್ಷಿ ಇದೆ. ಕೇಂದ್ರ ಬಜೆಟ್ ನಂತರ ಉಂಟಾದ ಇತ್ತೀಚಿನ ನಷ್ಟದಿಂದ ಮಾರುಕಟ್ಟೆ ಬೇಗನೇ ಚೇತರಿಸಿಕೊಂಡಿದೆ.
ಈ ಏರಿಳಿತವು ಉತ್ತಮ-ನಿರೀಕ್ಷಿತ US GDP ಗೆ ಧನಾತ್ಮಕ ಪ್ರತಿಕ್ರಿಯೆಗಳಿಂದ ನಡೆಸಲ್ಪಟ್ಟಿದೆ. ಇದು ಜಾಗತಿಕ ಬೇಡಿಕೆಗೆ ಉತ್ತಮವಾಗಿದೆ. ಹೂಡಿಕೆದಾರರು ತ್ರೈಮಾಸಿಕ ಗಳಿಕೆಗಳು ಮತ್ತು ಸ್ಟಾಕ್-ನಿರ್ದಿಷ್ಟ ಪ್ರವೃತ್ತಿಗಳ ಮೇಲೆ ಡಿಪ್ ತಂತ್ರದ ಮೇಲೆ ಖರೀದಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಲಾಭ ಗಳಿಸಿದ ಕಂಪನಿಗಳು
ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್ ಕಂಪನಿಯು ಅತಿ ಹೆಚ್ಚು ಲಾಭ ಗಳಿಸಿದ ಕಂಪನಿ ಎನಿಸಿದ್ದು, ಭಾರ್ತಿ ಏರ್‌ಟೆಲ್ ಲಾಭದ ಪ್ರಮಾಣವು ಶೇ.4.51ರಷ್ಟು ಏರಿಕೆಯಾಗಿದೆ. ಇದರ ಜತೆಗೆ ಅದಾನಿ ಪೋರ್ಟ್ಸ್, ಸನ್ ಫಾರ್ಮಾ, ಟಾಟಾ ಸ್ಟೀಲ್, ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಜೆಎಸ್‌ಡಬ್ಲ್ಯೂ ಸ್ಟೀಲ್ ಹಾಗೂ ಮಹೀಂದ್ರಾ & ಮಹೀಂದ್ರಾ ಕಂಪನಿಗಳು ಲಾಭ ಗಳಿಸಿವೆ.
ನಷ್ಟ ಅನುಭವಿಸಿದ ಕಂಪನಿಗಳು
ಅಂತೆಯೇ ಇಂದು ನೆಸ್ಲೆ ಕಂಪನಿಯು ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿಯಾಗಿದ್ದು, ಇದರ ಷೇರುಗಳ ಮೌಲ್ಯವು ಶೇ.0.07ರಷ್ಟು ಕುಸಿದಿದೆ. ಉಳಿದಂತೆ ಒಎನ್‌ಜಿಸಿ, ಟಾಟಾ ಕನ್ಸುಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಸೇರಿ ಹಲವು ಕಂಪನಿಗಳು ನಷ್ಟ ಅನುಭವಿಸಿದವು.
Advertisement