ಮುಂಬೈ: ಸತತ ಕುಸಿತದ ಹಾದಿಯಲ್ಲಿ ಸಾಗಿರುವ ಭಾರತೀಯ ಷೇರುಮಾರುಕಟ್ಟೆ 5ನೇ ದಿನವೂ ಭಾರಿ ಪ್ರಮಾಣದಲ್ಲಿ ಕುಸಿತ ದಾಖಲಿಸಿದ್ದು, ಸೆನ್ಸೆಕ್ಸ್ ಬರೊಬ್ಬರಿ 984.23 ಅಂಕಗಳ ಕುಸಿತ ಕಂಡಿದೆ.
ಭಾರತೀಯ ಷೇರುಮಾರುಕಟ್ಟೆ ಇಂದು ಶೇ.1.25ರಿಂದ ಶೇ.1.36ರವರೆಗೂ ಕುಸಿದಿದೆ.
ಸೆನ್ಸೆಕ್ಸ್ ಇಂದು ಶೇ.1.25ರಷ್ಟು ಅಂದರೆ, 984.23 ಅಂಕಗಳ ಕುಸಿತದೊಂದಿಗೆ 77,690.95 ಅಂಕಗಳಿಗೆ ಕುಸಿದಿದೆ. ಅಂತೆಯೇ ನಿಫ್ಚಿ ಶೇ.1.36ರಷ್ಟು ಕುಸಿತದೊಂದಿಗೆ 324.40 ಅಂಕಗಳ ಕುಸಿತ ಕಂಡು 23,559.05 ಅಂಕಗಳಿಗೆ ಕುಸಿದಿದೆ.
ತುಲನಾತ್ಮಕವಾಗಿ ದುರ್ಬಲವಾದ Q2 (2ನೇ ತ್ರೈಮಾಸಿಕ ವರದಿ)ಗಳಿಕೆಗಳು, ನಿರಂತರ ವಿದೇಶಿ ನಿಧಿಯ ಹರಿವು ಮತ್ತು ಹೆಚ್ಚುತ್ತಿರುವ ದೇಶೀಯ ಹಣದುಬ್ಬರ ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.
"ಡಾಲರ್ ಸೂಚ್ಯಂಕದಲ್ಲಿನ ಏರಿಕೆ ಮತ್ತು ಪಟ್ಟುಬಿಡದ ವಿದೇಶಿ ಹೊರಹರಿವಿನ ನಡುವೆ ವಲಯಗಳಾದ್ಯಂತ ಮಾರಾಟದ ಕಾರಣದಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಸಕಾರಾತ್ಮಕ ಪ್ರಾರಂಭದ ಹೊರತಾಗಿಯೂ ದಿನದವಾಹಿಟಿನ ಹೊತ್ತಿಗೆ ಕುಸಿದಿದೆ ಎಂದು ICRA ಅನಾಲಿಟಿಕ್ಸ್ ಹೇಳಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ 30 ಸಂಸ್ಥೆಗಳ ಪೈಕಿ ಟಾಟಾ ಮೋಟಾರ್ಸ್, NTPC, ಏಷ್ಯನ್ ಪೇಂಟ್ಸ್ ಮತ್ತು ಇನ್ಫೋಸಿಸ್ ಸಂಸ್ಥೆಗಳು ಮಾತ್ರ ಇಂದು ಲಾಭಾಂಶ ಗಳಿಸಿದ್ದು, ಉಳಿದೆಲ್ಲಾ ಸಂಸ್ಥೆಗಳ ಷೇರುಗಳು ನಷ್ಟ ಅನುಭವಿಸಿವೆ.
ಈ ಪೈಕಿ ಮಹೀಂದ್ರ ಮತ್ತು ಮಹೀಂದ್ರ, ಟಾಟಾ ಸ್ಟೀಲ್, ಅದಾನಿ ಪೋರ್ಟ್ಸ್, JSW ಸ್ಟೀಲ್, ಮತ್ತು ಇಂಡಸ್ಇಂಡ್ ಬ್ಯಾಂಕ್ ಸಂಸ್ಥೆಗಳ ನಷ್ಟದ ಪ್ರಮಾಣದ ಹೆಚ್ಚಿದೆ ಎಂದು ತಿಳಿದುಬಂದಿದೆ.
Advertisement