ಮುಂಬೈ: ಸತತ 2 ದಿನಗಳಿಂದ ಏರಿಕೆಯಲ್ಲಿ ಸಾಗಿದ್ದ ಭಾರತೀಯ ಷೇರುಮಾರುಕಟ್ಟೆ ಗುರುವಾರ ಮತ್ತೆ ತಲ್ಲಣಿಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿವೆ.
ಲಂಚ ನೀಡಿಕೆ ಆರೋಪದಡಿ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧದ ಆರೋಪಗಳು ಇಂದು ಷೇರುಮಾರುಕಟ್ಟೆಯನ್ನೇ ತಲ್ಲಣಗೊಳಿಸಿದ್ದು ಭಾರಿ ಕುಸಿತಗೊಂಡಿದ್ದ ಭಾರತೀಯ ಷೇರುಮಾರುಕಟ್ಟೆ ವಹಿವಾಟು ಅಂತ್ಯದ ಹೊತ್ತಿಗೆ ಚೇತರಿಸಿಕೊಂಡು ಇಳಿಕೆ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿತು.
ಇಂದು ಭಾರತೀಯ ಷೇರುಮಾರುಕಟ್ಟೆ ಭಾರಿ ಇಳಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ 422.59 ಅಂಕಗಳ ಇಳಿಕೆಯೊಂದಿಗೆ 77,155.79 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಅಂತೆಯೇ ನಿಫ್ಟಿ ಕೂಡ 168.60 ಅಂಕ ಏರಿಕೆಯಾಗಿ, 23,349.90 ಅಂಕಗಳಿಗೆ ಕುಸಿತವಾಗಿದೆ.
ಭಾರತೀಯ ಷೇರುಮಾರುಕಟ್ಟೆ ಇಂದು ಶೇ.0.54ರಿಂದ ಶೇ0.72ರವರೆಗೂ ಇಳಿಕೆಯಾಗಿದ್ದು, ಸೆನ್ಸೆಕ್ಸ್ ಇಂದು 0.54ರಷ್ಟು ಅಂದರೆ, 422.59 ಅಂಕಗಳ ಇಳಿಕೆಯೊಂದಿಗೆ 77,155.79 ಅಂಕಗಳಿಗೆ ಕುಸಿದಿದೆ. ಅಂತೆಯೇ ನಿಫ್ಟಿ ಶೇ.0.72ರಷ್ಟು ಏರಿಕೆಯೊಂದಿಗೆ 168.60 ಅಂಕಗಳ ಇಳಿಕೆ ಕಂಡು 23,349.90 ಅಂಕಗಳಿಗೆ ಕುಸಿತವಾಗಿದೆ.
ವಲಯದ ಸೂಚ್ಯಂಕಗಳಲ್ಲಿ, ಇಂಧನ, ಎಫ್‌ಎಂಸಿಜಿ, ತೈಲ ಮತ್ತು ಅನಿಲ, ಪಿಎಸ್‌ಯು ಬ್ಯಾಂಕ್, ಮೀಡಿಯಾ, ಮೆಟಲ್ ವಿಭಾಗದ ಷೇರುಗಳು ಕುಸಿತ ಕಂಡಿವೆ. ಅಂತೆಯೇ ರಿಯಾಲ್ಟಿ, ಮಾಹಿತಿ ತಂತ್ರಜ್ಞಾನ ವಿಭಾಗ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಎಸ್‌ಬಿಐ ಅತಿ ದೊಡ್ಡ ನಷ್ಟವನ್ನು ಅನುಭವಿಸಿದವು.ಅಂತೆಯೇ ಪವರ್ ಗ್ರಿಡ್ ಕಾರ್ಪ್, ಅಲ್ಟ್ರಾಟೆಕ್ ಸಿಮೆಂಟ್, ಹಿಂಡಾಲ್ಕೊ ಇಂಡಸ್ಟ್ರೀಸ್, ಟಾಟಾ ಸ್ಟೀಲ್ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ಲಾಭ ಗಳಿಸಿದವು.
Advertisement