
ಮುಂಬೈ: ಕಳೆದೊಂದು ತಿಂಗಳಿನಿಂದ ಹೆಚ್ಚಾಗಿ ಕುಸಿತದ ಹಾದಿಯಲ್ಲಿರುವ ಭಾರತೀಯ ಷೇರುಮಾರುಕಟ್ಟೆ ಈ ವಾರವೂ ಸತತ 2ನೇ ದಿನ ಕುಸಿತದೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ.
ಇಂದು ಸೆನ್ಸೆಕ್ಸ್ 318.76 ಅಂಕಗಳ ಕುಸಿತದೊಂದಿಗೆ 81,501.36 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದ್ದರೆ, ನಿಫ್ಟಿ ಕೂಡ 86.05 ಅಂಕಗಳ ಕುಸಿತದೊಂದಿಗೆ 24,971.30 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿಮಾಡಲಾದ M&M, ಇನ್ಫೋಸಿಸ್, ಅದಾನಿ ಪೋರ್ಟ್ಸ್, JSW ಸ್ಟೀಲ್, ಟಾಟಾ ಮೋಟಾರ್ಸ್, ಟೈಟನ್ ಸಂಸ್ಥೆಗಳ ಷೇರುಗಳು ನಷ್ಟ ಅನುಭವಿಸಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್, ಭಾರ್ತಿ ಏರ್‌ಟೆಲ್, ರಿಲಯನ್ಸ್, ಏಷ್ಯನ್ ಪೇಂಟ್ಸ್ ಮತ್ತು ಎಸ್‌ಬಿಐ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ.
ಅಂತೆಯೇ ಆಟೋ ಮತ್ತು ಐಟಿ ವಲಯಗಳ ಷೇರುಗಳ ಮೌಲ್ಯ ಶೇ.1ರಷ್ಟು ಕುಸಿದಿದ್ದು, ಮೀಡಿಯಾ, ಮೆಟಲ್, ಫಾರ್ಮಾ, ಎಫ್‌ಎಂಸಿಜಿ, ರಿಯಾಲ್ಟಿ, ಖಾಸಗಿ ಬ್ಯಾಂಕ್‌ಗಳು, ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ಹೆಲ್ತ್‌ಕೇರ್ ವಲಯದ ಷೇರುಗಳೂ ಕೂಡ ನಷ್ಟ ಅನುಭವಿಸಿವೆ. ಹಣಕಾಸು ಸೇವೆಗಳು ಮತ್ತು OMC ವಲಯದ ಷೇರುಗಳ ಮೌಲ್ಯದಲ್ಲಿ ಶೇ.0.5ರಷ್ಟು ಏರಿಕೆ ಕಂಡುಬಂದಿದೆ.
Advertisement