Indian Stock Market: ಅಮೆರಿಕದಲ್ಲಿ ಬಡ್ಡಿದರ ಕಡಿತದ ಎಫೆಕ್ಟ್: ಸಾರ್ವಕಾಲಿಕ ದಾಖಲೆ ಬರೆದ Sensex, Nifty

ಅಮೆರಿಕ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರ ಕಡಿತ ಮಾಡಿದ ಬೆನ್ನಲ್ಲೇ ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಬರೊಬ್ಬರಿ 735.95 ಅಂಕಗಳಿಗೆ ಏರಿಕೆಯಾಗಿ ಮೊದಲ ಬಾರಿಗೆ 83 ಸಾವಿರ (83,684.18) ಗಡಿ ದಾಟಿತು.
Sensex
ಭಾರತೀಯ ಷೇರುಮಾರುಕಟ್ಟೆ
Updated on

ಮುಂಬೈ: ನಿರೀಕ್ಷೆಯಂತೆಯೇ ಅಮೆರಿಕ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರ ಕಡಿತ ಮಾಡಿದ್ದು, ಇದರ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ.

ಹೌದು.. ಅತ್ತ ಅಮೆರಿಕ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರ ಕಡಿತ ಮಾಡಿದ ಬೆನ್ನಲ್ಲೇ ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಬರೊಬ್ಬರಿ 735.95 ಅಂಕಗಳಿಗೆ ಏರಿಕೆಯಾಗಿ ಮೊದಲ ಬಾರಿಗೆ 83 ಸಾವಿರ (83,684.18) ಗಡಿ ದಾಟಿತು.

ಅಂತೆಯೇ ನಿಫ್ಟಿಕೂಡ 209.55 ಅಂಕಗಳ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ 25,587.10.ಅಂಕಗಳಿಗೆ ತಲುಪಿತು.

Sensex
Indian Stock Market: ಎರಡು ದಿನಗಳ ಏರಿಕೆ ಬೆನ್ನಲ್ಲೇ ಕುಸಿತ, Sensex 400 ಅಂಕ ಇಳಿಕೆ!

ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ ಅಮೆರಿಕ ಬಡ್ಡಿದರ ಕಡಿತ

ಇನ್ನು ಇಂದಿನ ವಹಿವಾಟಿನ ಮೇಲೆ ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸಿದ್ದು ಪರಿಣಾಮ ಬೀರಿದೆ. ಕಳೆದ 4 ವರ್ಷಗಳಲ್ಲಿ ಒಮ್ಮೆಯೂ ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸಿರಲಿಲ್ಲ. ಇದೇ ಮೊದಲ ಬಾರಿಗೆ ಬಡ್ಡಿದರ ಕಡಿತ ಮಾಡಿದ್ದು, ಇದು ಷೇರುಮಾರುಕಟ್ಟೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.

ಮೂಲಗಳ ಪ್ರಕಾರ ಅಮೆರಿಕ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರದಲ್ಲಿ 50 bps ಕಡಿತಗೊಳಿಸಿದೆ. ಅಲ್ಲದೆ ಇದು ಭಾರತದಲ್ಲೂ ಆರ್ ಬಿಐ ಬಡ್ಡಿದರ ಕಡಿತಕ್ಕೆ ಮುಂದಾಗಲು ಒತ್ತಾಯಿಸಬಹುದು ಎಂದು ಖ್ಯಾತ ಹೂಡಿಕೆತಜ್ಞ, ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಹೇಳಿದ್ದಾರೆ.

50 ಅಂಶಗಳ ಕಡಿತಗೊಳಿಸುವ ಮೂಲಕ ಅಮೆರಿಕ ಫೆಡರಲ್ ಬ್ಯಾಂಕ್ ಅವರ ದುರ್ಬಲ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ದಿಟ್ಟ ನಿರ್ಧಾರ ಕೈಗೊಂಡಿದೆ. ಇದು ಮೃದುವಾದ ಬಡ್ಡಿದರದ ಆಡಳಿತವನ್ನು ಪ್ರಾರಂಭಿಸಲು ಆರ್‌ಬಿಐ ಸೇರಿದಂತೆ ಇತರ ಜಾಗತಿಕ ಕೇಂದ್ರೀಯ ಬ್ಯಾಂಕ್‌ಗಳಿಗೆ ಬಾಗಿಲು ತೆರೆಯುತ್ತದೆ" ಎಂದು ವಾಲ್‌ಫೋರ್ಟ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ ಸಂಸ್ಥಾಪಕ ವಿಜಯ್ ಭಾರಡಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com