
ಮುಂಬೈ: ಭಾರತೀಯ ಷೇರುಮಾರುಕಟ್ಟೆ ಸತತ 2ನೇ ದಿನವೂ ಕುಸಿದಿದ್ದು, ಸೆನ್ಸೆಕ್ಸ್ 184 ಅಂಕಗಳ ಇಳಿಕೆ ಕಂಡಿದೆ.
ಗುರುವಾರವೂ ಷೇರುಮಾರುಕಟ್ಟೆಯ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಪಿಎಸ್ ಯು ಬ್ಯಾಂಕ್ ವಲಯದ ಷೇರುಗಳ ಮೌಲ್ಯ ಕುಸಿತಕಂಡಿದ್ದು, ನಿಫ್ಟಿ ಬ್ಯಾಂಕ್ ವಲಯದ ಷೇರುಗಳು ಅಲ್ಪ ಪ್ರಮಾಣದ ಏರಿಕೆ ಕಂಡಿವೆ.
ಮಂಗಳವಾರ ಭಾರಿ ಏರಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಬುಧವಾರ ಕುಸಿತ ಕಂಡಿತ್ತು. ಇದೀಗ ಗುರುವಾರವೂ ಕೂಡ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.27ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.39ರಷ್ಟು ಅಲ್ಪ ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು 213.12 ಅಂಕಗಳ ಇಳಿಕೆಯೊಂದಿಗೆ 78,058.16 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 92.95 ಅಂಕಗಳ ಇಳಿಕೆಯೊಂದಿಗೆ 23,603.35 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಸಿಪ್ಲಾ, ಅದಾನಿ ಪೋರ್ಟ್ಸ್, ಇನ್ಫೋಸಿಸ್, ಡಾ. ರೆಡ್ಡೀಸ್ ಲ್ಯಾಬ್ಸ್, ಟಾಟಾ ಕನ್ಸ್ಯೂಮರ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಟೈಟಾನ್, ಎನ್‌ಟಿಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಟಿಸಿ, ಟಾಟಾ ಸ್ಟೀಲ್, ಮಹೀಂದ್ರಾ & ಮಹೀಂದ್ರಾ, ಭಾರ್ತಿ ಏರ್‌ಟೆಲ್ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
Advertisement