ಮುಂಬೈ: ವಾರದ ಮೊದಲ ದಿನ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದ ಏರಿಕೆ ಕಂಡಿದ್ದು, ಸೋಮವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.095ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.13ರಷ್ಟು ಏರಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು 76.54 ಅಂಕಗಳ ಅಲ್ಪ ಏರಿಕೆಯೊಂದಿಗೆ 80,787.30 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 32.15 ಅಂಕಗಳ ಏರಿಕೆಯೊಂದಿಗೆ 24,773.15 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ, ಎಫ್ ಸಿಜಿ ವಲಯಗಳ ಷೇರುಗಳ ಮೌಲ್ಯದಲ್ಲಿ ಬದಲಾವಣೆ ಕಂಡಿವೆ.
ಯಾರಿಗೆ ಲಾಭ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯ ಷೇರು ಸುಮಾರು ಶೇಕಡಾ 3.96 ರಷ್ಟು ಏರಿಕೆಯಾಗಿದ್ದು, ಟಾಟಾ ಮೋಟರ್ಸ್ ಸಂಸ್ಥೆಯ ಷೇರು ಕೂಡ 3.97ರಷ್ಟು ಏರಿಕೆ ಕಂಡಿದೆ.
ಉಳಿದಂತೆ ಮಾರುತಿ, ಅದಾನಿ ಪೋರ್ಟ್ಸ್, ಬಜಾಜ್ ಫೈನಾನ್ಸ್ ಮತ್ತು ಅಲ್ಟ್ರಾಟೆಕ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ.
Advertisement