

ಮುಂಬೈ: ಇರಾನ್-ಅಮೆರಿಕ ಕದನ ವಿರಾಮದ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ಜಿಗಿತ ಕಂಡುಬಂದಿದ್ದು, ಹೂಡಿಕೆದಾರರು ಹರ್ಷಗೊಂಡಿದ್ದಾರೆ.
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 2,775.73 ಪಾಯಿಂಟ್‌ಗಳಿಂದ 77,392.31 ಗೆ ಜಿಗಿದಿದ್ದು, ನಿಫ್ಟಿ ಕೂಡಾ 815.2 ಪಾಯಿಂಟ್ ಏರಿಕೆ ಕಂಡು 23,938.85ಕ್ಕೆ ತಲುಪಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ವಾರಗಳ ಕದನ ವಿರಾಮ ಘೋಷಿಸಿದ ನಂತರ ಇದೊಂದು ಐತಿಹಾಸಿಕ ಗೆಲುವು ಎಂದು ಇರಾನ್ ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯು ಹೇಳಿಕೊಂಡಿತ್ತು. ಇದಾದ ಬಳಿಕ ಕೆಲವು ದಿನಗಳಿಂದ ತೀವ್ರ ಕುಸಿತ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಈಗ ಜಿಗಿತ ಕಂಡುಬಂದಿದೆ.
ಯುದ್ಧದ ಎಲ್ಲಾ ಉದ್ದೇಶಗಳನ್ನು ಸಾಧಿಸಲಾಗಿದೆ ಎಂದು ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿಕೊಂಡಿರುವುದಾಗಿ Press Tv ವರದಿ ಮಾಡಿದೆ.
ನಿನ್ನೆ, ದೇಶೀಯ ಇಕ್ವಿಟಿ ಮಾರುಕಟ್ಟೆಗಳು ತೀವ್ರ ಕುಸಿತ ಕಂಡಿತ್ತು. ಮಾರಾಟದ ಒತ್ತಡದ ನಡುವೆ ಕೆಂಪು ಬಣ್ಣದಲ್ಲಿ ಪ್ರಾರಂಭವಾಯಿತು ಆದರೆ IT ಮತ್ತು ಲೋಹದ ಸ್ಟಾಕ್ ನಿಂದ ವಹಿವಾಟು ಅಂತ್ಯದ ವೇಳೆಗೆ ಸ್ವಲ್ಪ ಚೇತರಿಸಿಕೊಂಡಿತ್ತು.
ನಿಫ್ಟಿ 155.40 ಪಾಯಿಂಟ್ ಅಥವಾ ಶೇ. 0.68 ರಷ್ಟು ಏರಿಕೆಯಾಗಿ 23,015.90 ಕ್ಕೆ ವಹಿವಾಟು ಕೊನೆಗೊಂಡಿತು. ಬಿಎಸ್‌ಇ ಸೆನ್ಸೆಕ್ಸ್ ಕೂಡ 509.73 ಪಾಯಿಂಟ್ ಅಥವಾ ಶೇ. 0.69 ರಷ್ಟು ಏರಿಕೆ ಕಂಡು 74,616.58ಕ್ಕೆ ಸ್ಥಿರವಾಗಿತ್ತು.
Advertisement