PF-ESI ಇದ್ದರೂ ಆಯುಷ್ಮಾನ್ ಭಾರತ್ ಕಾರ್ಡ್ ಸಿಗುತ್ತಾ? ಆಯುಷ್ಮಾನ್ ಭಾರತ್ ಯೋಜನೆಯ ನಿಯಮವೇನು?

ಬಡ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗಾಗಿ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾದರೆ ಈಗಾಗಲೇ PF/ESI ಹೊಂದಿರುವ ನೌಕರರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಕಾರ್ಡ್ ಸಿಗುತ್ತದೆಯೇ ಎಂಬ ಗೊಂದಲ ಅನೇಕರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ:
Can people with PF and ESI are eligible for Ayushman Bharat
PF-ESI ಇದ್ದರೂ ಆಯುಷ್ಮಾನ್ ಭಾರತ್ ಕಾರ್ಡ್ ಸಿಗುತ್ತಾ? Online Desk
Updated on

ಆಯುಷ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳು ಜೀವನದಲ್ಲಿ ಅತ್ಯಂತ ಮುಖ್ಯ. ದುಡಿಯುವ ಪ್ರತಿಯೊಬ್ಬ ವ್ಯಕ್ತಿಗೂ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ಮತ್ತು ಆರ್ಥಿಕ ಭದ್ರತೆ ಅತ್ಯಗತ್ಯವಾಗಿರುತ್ತದೆ. ಹಾಗಾಗಿಯೇ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ PF ಮತ್ತು ESI ಸೌಲಭ್ಯಗಳಿದ್ದರೆ, ಕೇಂದ್ರ ಸರ್ಕಾರವು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗಾಗಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಈಗಾಗಲೇ PF ಅಥವಾ ESI ಹೊಂದಿರುವ ನೌಕರರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಕಾರ್ಡ್ ಸಿಗುತ್ತದೆಯೇ ಎಂಬ ಗೊಂದಲ ಅನೇಕರಲ್ಲಿದೆ.? ಅದಕ್ಕೆ ಉತ್ತರ ಇಲ್ಲಿದೆ:

PF-ESI ಇದ್ದರೂ...

ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ PF ಅಥವಾ ESI ಸೌಲಭ್ಯ ಹೊಂದಿರುವವರು ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ನಿಮ್ಮ ಬಳಿ ಖಾಸಗಿ ಆರೋಗ್ಯ ವಿಮೆ ಇದ್ದರೂ ಸಹ ಈ ಯೋಜನೆಯ ಲಾಭ ಪಡೆಯಲು ಅಡ್ಡಿಯಿಲ್ಲ.

ಹೌದು, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ನೌಕರರ ರಾಜ್ಯ ವಿಮಾ ನಿಗಮ ESIC ನಡುವೆ ಒಪ್ಪಂದ ಆಗಿದೆ. ಇದರ ಪ್ರಕಾರ ESI ಫಲಾನುಭವಿಗಳು ಕೂಡ ಪಿಎಂ ಜೆಎವೈ ಪ್ಯಾನೆಲ್‌ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆದ್ದರಿಂದ PF - ESI ಇರುವುದರಿಂದ ಆಯುಷ್ಮಾನ್ ಕಾರ್ಡ್ ಸಿಗುವುದಿಲ್ಲ ಎಂಬುದು ತಪ್ಪು ಕಲ್ಪನೆ.

Can people with PF and ESI are eligible for Ayushman Bharat
5 ವರ್ಷಕ್ಕಿಂತ ಕಡಿಮೆ ಕೆಲಸ ಮಾಡಿದ್ರೆ ಗ್ರಾಚ್ಯುಟಿ ಸಿಗಲ್ವಾ? ಕಾನೂನು ಹೇಳೋದು ಏನು?

ಹಾಗಾದ್ರೆ, ಯೋಜನೆ ಯಾರಿಗೆ ಅನ್ವಯಿಸುವುದಿಲ್ಲ?

ಕೆಲವು ವರ್ಗದ ಜನರು ಈ ಯೋಜನೆಗೆ ಅನರ್ಹರು ಎಂದು ನಿಯಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. 3BHK ಗಿಂತ ಹೆಚ್ಚು ಮನೆ ಹೊಂದಿರುವವರು 5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವವರು ಕುಟುಂಬದಲ್ಲಿ ಸರ್ಕಾರಿ ನೌಕರರಿರುವವರು ನೋಂದಾಯಿತ ಕೃಷಿಯೇತರ ವ್ಯವಹಾರ ನಡೆಸುವವರು ಮತ್ತು 3 ಅಥವಾ 4 ಚಕ್ರದ ವಾಹನ ಹೊಂದಿರುವವರು ಅರ್ಹರಲ್ಲ.

ಅರ್ಹತೆ ಹೇಗೆ ಚೆಕ್ ಮಾಡುವುದು?

  • ನಿಮ್ಮ ಅರ್ಹತೆಯನ್ನು PMJaY ಫಲಾನುಭವಿ ಪೋರ್ಟಲ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ Am I Eligible ಆಯ್ಕೆ ಮೂಲಕ ಚೆಕ್ ಮಾಡಬಹುದು.

  • ಮೊಬೈಲ್ ಸಂಖ್ಯೆ ಹೆಸರು ರಾಜ್ಯ ಪಡಿತರ ಚೀಟಿ ಅಥವಾ ಮನೆ ಸಂಖ್ಯೆ ಬಳಸಿ ವಿವರ ಪಡೆಯಬಹುದು.

  • ಆನ್‌ಲೈನ್ ಮೂಲಕ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.

  • ಅರ್ಹರಾಗಿದ್ದರೆ ಕಾರ್ಡ್ ತಕ್ಷಣ ಡೌನ್‌ಲೋಡ್ ಮಾಡಬಹುದು.

ಒಟ್ಟಾರೆಯಾಗಿ, ಆಯುಷ್ಮಾನ್ ಭಾರತ್ ಯೋಜನೆಯ ಮುಖ್ಯ ಉದ್ದೇಶ ಬಡವರಿಗೆ ವೈದ್ಯಕೀಯ ಹೊರೆ ಕಡಿಮೆ ಮಾಡುವುದು. ಹಾಗಾಗಿ, PF - ESI ಹೊಂದಿರುವುದರಿಂದ ಅರ್ಹತೆ ಕಳೆದುಕೊಳ್ಳುವುದಿಲ್ಲ. ಆದರೆ ಇತರ ಆರ್ಥಿಕ ಮಾನದಂಡಗಳನ್ನು ಪೂರೈಸಬೇಕು. ಅರ್ಹರಿದ್ದರೆ ಇಂದೇ ಪೋರ್ಟಲ್‌ನಲ್ಲಿ ಹೆಸರು ಪರಿಶೀಲಿಸಿ ಕಾರ್ಡ್ ಪಡೆಯಿರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com