ಬ್ಯಾಂಕ್ ಗ್ರಾಹಕರಿಗೆ RBI ಗುಡ್ ನ್ಯೂಸ್; ಇನ್ಮೇಲೆ ಈ ಸೇವೆ ಫ್ರೀ ಫ್ರೀ ಫ್ರೀ!

ಬ್ಯಾಂಕ್ ಖಾತೆದಾರರ ಜೇಬಿಗೆ ಕತ್ತರಿ ಹಾಕುತ್ತಿದ್ದ SMS ಶುಲ್ಕಗಳಿಗೆ ಸಂಬಂಧಿಸಿದಂತೆ RBI ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬ್ಯಾಂಕುಗಳು ವಿವಿಧ ಕಾರಣಗಳಿಗಾಗಿ ವಿಧಿಸುತ್ತಿದ್ದ ಅನಗತ್ಯ ಎಸ್‌ಎಂಎಸ್ ಶುಲ್ಕಗಳಿಗೆ ಆರ್‌ಬಿಐ ಬ್ರೇಕ್ ಹಾಕಿದ್ದು, ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
Good news from RBI for bank customers.
ಬ್ಯಾಂಕ್ ಗ್ರಾಹಕರಿಗೆ RBIನಿಂದ ಗುಡ್ ನ್ಯೂಸ್Online Desk
Updated on

RBI on Bank SMS Charges: ಒಮ್ಮೆ ಬ್ಯಾಂಕ್ ಅಕೌಂಟ್ (Bank Account) ಓಪನ್ ಮಾಡಿದ್ರೆ ಸಾಕು ಸಾಲ ತಗೊಳದೆ, ಖಾತೆಯಲ್ಲಿ ಸಾವಿರಾರು ರೂಪಾಯಿ ಸೇವಿಂಗ್ಸ್ ಮಾಡಿದ್ರು ಸಹ ಒಂದಲ್ಲಾ ಒಂದು ನೆಪ ಹೇಳಿ, ಆ ಶುಲ್ಕ ಈ ಶುಲ್ಕ ಎನ್ನುತಾ ಹಣ ಕಟ್ ಮಾಡುತ್ತಾರೆ. ಆದ್ರೆ, ಇದ್ರಿಂದ ಎಷ್ಟೇ ಕೋಪ ಬಂದ್ರು ಗ್ರಾಹಕರು ಏನು ಮಾಡಲು ಸಾದ್ಯವಾಗುತ್ತಿರಲಿಲ್ಲ. ಇದರ ನಡುವೆ ಗ್ರಾಹಕರ ನೋವನ್ನು ಅರ್ಥ ಮಾಡಿಕೊಂಡಿರುವ ಆರ್‌ಬಿಐ (RBI) ಎಲ್ಲ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ! ಅದುವೇ, SMS ಚಾರ್ಜ್ ಎನ್ನುತ್ತಾ ಪ್ರತಿ ಮೂರು ತಿಂಗಳಿಗೆ ಹಣ ಕಟ್ ಮಾಡುವ ಬ್ಯಾಂಕಿನವರ ಆಟಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಬ್ರೇಕ್ ಹಾಕಿದೆ.

ಹೌದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ SMS ಶುಲ್ಕಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರಂತೆ, ಬ್ಯಾಂಕುಗಳು ಇನ್ನು ಮುಂದೆ ಗ್ರಾಹಕರಿಗೆ ಜಾಗೃತಿ ಮೂಡಿಸುವ, ಪ್ರಚಾರದ ಅಥವಾ ನಿಯಮ ಪಾಲನೆ ಹೆಸರಿನಲ್ಲಿ ಕಳುಹಿಸುವ SMSಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದಿದೆ. ಇದರೊಂದಿಗೆ, 500 ರೂಪಾಯಿ ಮತ್ತು ಅದಕ್ಕಿಂತಲೂ ಕಡಿಮೆ ಮೊತ್ತದ ವಹಿವಾಟುಗಳನ್ನು SMS ಮೂಲಕ ಅಲರ್ಟ್‌ ಮಾಡುವುದು ಕಡ್ಡಾಯವಲ್ಲ ಎಂದು ಆದೇಶ ಮಾಡಿದೆ.

ಹಾಗಾದ್ರೆ, ಪರ್ಯಾಯ ಏನು?

ಆರ್‌ಬಿಐ ಹೊಸ ನಿಯಮಗಳ ಅನುಸಾರ, ಇನ್ನು ಮುಂದೆ ಬ್ಯಾಂಕ್‌ಗಳು ₹500 ಕ್ಕಿಂತ ಕಡಿಮೆ ಮೊತ್ತದ ವಹಿವಾಟುಗಳಿಗಾಗಿ SMSಗಳ ಬದಲು ವಾಟ್ಸಾಪ್, ಇಮೇಲ್ ಅಥವಾ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳ ಮೂಲಕ ನೋಟಿಫಿಕೇಶನ್‌ಗಳನ್ನು ಕಳುಹಿಸಬಹುದು. ಆದರೆ, 500 ರೂಪಾಯಿಗಿಂತ ಹೆಚ್ಚಿನ ಎಲ್ಲಾ ಹಣಕಾಸಿನ ವಹಿವಾಟುಗಳಿಗೆ ಭದ್ರತಾ ದೃಷ್ಟಿಯಿಂದ ಎಂದಿನಂತೆ ಕಡ್ಡಾಯವಾಗಿ SMS ಅಲರ್ಟ್‌ಗಳು ಲಭ್ಯವಿರುತ್ತದೆ.

Good news from RBI for bank customers.
ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆಯೂ Repo ದರ ಯಥಾಸ್ಥಿತಿ: ಶೇ.5.25ದಲ್ಲೇ ಮುಂದುವರಿಸಿದ RBI; ಸಾಲಗಾರರಿಗೆ ಬಿಗ್ ರಿಲೀಫ್!

ಗ್ರಾಹಕರಿಗೆ ಲಾಭವೇನು?

ಈ ಹಿಂದೆ ಬ್ಯಾಂಕ್‌ಗಳು SMS ಶುಲ್ಕ ಎನ್ನುತಾ ಪ್ರತಿ ಮೂರು ತಿಂಗಳಿಗೊಮ್ಮೆ 15 ರಿಂದ 18 ರೂಪಾಯಿವರೆಗೆ ಕಟ್ ಮಾಡುತ್ತಿದ್ದರು. ಅದರಲ್ಲೂ, ಕೆಲವೊಮ್ಮೆ ಈಗ ಮಾಡಿದ ಟ್ರಾನ್ಸಾಕ್ಷನ್ಗೆ 5 ರಿಂದ 6 ಗಂಟೆಯ ನಂತರ ಮೆಸೇಜ್ ಬರುತ್ತಿತ್ತು. ಆದರೂ ಕೂಡ ಶುಲ್ಕ ಕಟ್ ಮಾಡುತ್ತಿದ್ದು ಗ್ರಾಹಕರಲ್ಲಿ ಅಸಮಾಧಾನ ಉಂಟುಮಾಡುತ್ತಿತ್ತು. ಆದರೆ ಆರ್‌ಬಿಐನ ಈ ಹೊಸ ನಿಯಮವು ಆ ಅಸಮಾಧಾನವನ್ನು ತಣ್ಣಗೆ ಮಾಡಿದೆ.

ಒಟ್ಟಾರೆಯಾಗಿ, ಆರ್‌ಬಿಐನ ಈ ಕ್ರಮವು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ಹಿತರಕ್ಷಣೆಯನ್ನು ಹೆಚ್ಚಿಸಿದೆ. ಜೊತೆಗೆ ಸಣ್ಣ ಗ್ರಾಹಕರಿಗೆ ಅನಗತ್ಯ ಶುಲ್ಕಗಳಿಂದ ಮುಕ್ತಿ ಸಿಕ್ಕಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com