AI ಬೂಮ್‌ನಿಂದ ಸೆಮಿಕಂಡಕ್ಟರ್ ಬೇಡಿಕೆ ಹೆಚ್ಚಳ; ಜೂನ್‌ನಲ್ಲಿ ಚೀನಾದ ರಫ್ತು ಪ್ರಮಾಣದಲ್ಲಿ ಭಾರೀ ಏರಿಕೆ!

ಚೀನಾದ ರಫ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಜೂನ್‌ನಲ್ಲಿ ರಫ್ತು ಹೆಚ್ಚಳವು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕಿಂತ ಅತ್ಯುತ್ತಮವಾಗಿದೆ.
China’s exports jump 27% in June as AI boom drives semiconductor demand
ಸಾಂದರ್ಭಿಕ ಚಿತ್ರ
Updated on

ಹಾಂಗ್ ಕಾಂಗ್: ಜೂನ್‌ನಲ್ಲಿ ಚೀನಾದ ರಫ್ತು ಭಾರೀ ವೇಗ ಪಡೆದುಕೊಂಡಿದ್ದು, ಕೃತಕ ಬುದ್ಧಿಮತ್ತೆಯ ಬೂಮ್‌ನಿಂದಾಗಿ ಕಳೆದ ವರ್ಷಕ್ಕಿಂತ ಈ ವರ್ಷ ರಫ್ತು ಪ್ರಮಾಣದಲ್ಲಿ ಶೇ. 27 ರಷ್ಟು ಹೆಚ್ಚಾಗಿದೆ ಎಂದು ಕಸ್ಟಮ್ಸ್ ಏಜೆನ್ಸಿ ಮಂಗಳವಾರ ತಿಳಿಸಿದೆ.

ಚೀನಾದ ರಫ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಜೂನ್‌ನಲ್ಲಿ ರಫ್ತು ಹೆಚ್ಚಳವು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕಿಂತ ಅತ್ಯುತ್ತಮವಾಗಿದೆ. ಕಳೆದ ಮೇ ತಿಂಗಳಲ್ಲಿ ಶೇ. 19.4 ರಷ್ಟು ಏರಿಕೆಯಾಗಿದೆ.

ಇನ್ನೂ ಜೂನ್‌ನಲ್ಲಿ ಆಮದು ಸಹ ಶೇ. 36 ರಷ್ಟು ಏರಿಕೆಯಾಗಿದ್ದು, ಮೇ ತಿಂಗಳಿನಲ್ಲಿ ವರ್ಷದಿಂದ ವರ್ಷಕ್ಕೆ ಶೇ. 27.4 ರಷ್ಟು ಬೆಳವಣಿಗೆ ಕಂಡುಬಂದಿದೆ. ಇರಾನ್ ಯುದ್ಧದಿಂದಾಗಿ ಆಮದು ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

China’s exports jump 27% in June as AI boom drives semiconductor demand
AI ಸೇವೆಗಳಲ್ಲಿ ಕೂಡ ಪ್ರೈಸ್ ವಾರ್ ಗೆ ಮುನ್ನುಡಿ ಬರೆಯುತ್ತಿದೆ ಚೀನಾ! (ಹಣಕ್ಲಾಸು)

ಜೂನ್‌ನಲ್ಲಿ ಚೀನಾ 125.6 ಬಿಲಿಯನ್ ಡಾಲರ್ ವ್ಯಾಪಾರ ಹೆಚ್ಚುವರಿಯನ್ನು ದಾಖಲಿಸಿದ್ದು, ಮೇ ತಿಂಗಳಲ್ಲಿ 105.4 ಬಿಲಿಯನ್ ಡಾಲರ್ ವ್ಯಾಪಾರ ಆಗಿತ್ತು.

"ಜೂನ್‌ನಲ್ಲಿ ವ್ಯಾಪಾರ ಮೌಲ್ಯವು ಮತ್ತೊಂದು ದೊಡ್ಡ ಏರಿಕೆಯನ್ನು ಕಂಡಿದೆ" ಎಂದು ಕ್ಯಾಪಿಟಲ್ ಎಕನಾಮಿಕ್ಸ್‌ನಲ್ಲಿ ಚೀನಾ ರ್ಥಶಾಸ್ತ್ರಜ್ಞ ಜೂಲಿಯನ್ ಇವಾನ್ಸ್-ಪ್ರಿಚರ್ಡ್ ಅವರು ಹೇಳಿದ್ದಾರೆ. "ಇದು ಮುಖ್ಯವಾಗಿ AI ಬೂಮ್ ಹಿನ್ನೆಲೆಯಲ್ಲಿ ಸೆಮಿಕಂಡಕ್ಟರ್ ಬೆಲೆಗಳಲ್ಲಿನ ಇತ್ತೀಚಿನ ಏರಿಕೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ಅದನ್ನು ಬದಿಗಿಟ್ಟರೂ ಸಹ, ಚೀನೀ ಸರಕುಗಳಿಗೆ ವಿದೇಶಿ ಬೇಡಿಕೆ ದೃಢವಾಗಿದೆ" ಎಂದಿದ್ದಾರೆ.

AIನ ತ್ವರಿತ ಅಳವಡಿಕೆಯು ಅರೆವಾಹಕಗಳು ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳ ಅಗತ್ಯವನ್ನು ಹೆಚ್ಚಿಸುವುದರಿಂದ ಚೀನಾದ ವಾಹನಗಳು, ವಿಶೇಷವಾಗಿ EV ಗಳು ಮತ್ತು ಇತರ ತಂತ್ರಜ್ಞಾನ-ಸಂಬಂಧಿತ ಉತ್ಪನ್ನಗಳ ರಫ್ತು ಭರದಿಂದ ಸಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com