ಮಹಿಳೆಯರ ಸ್ವಾವಲಂಬನೆಗೆ ಹೊಸ ಬಲ: ಮಹಿಳಾ ಸಮೃದ್ಧಿ ಯೋಜನೆಯಡಿ ಸಿಗಲಿದೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ; ಅರ್ಜಿ ಸಲ್ಲಿಸೋದು ಹೇಗೆ?

ಸ್ವಂತ ಉದ್ಯೋಗ ಶುರು ಮಾಡಲು ಹಣದ ಕೊರತೆಯೇ? ಇಲ್ಲಿದೆ ನೋಡಿ ಸ್ವಂತ ವ್ಯಾಪಾರ ಕನಸಿಗೆ ಬೆನ್ನೆಲುಬಾಗಿರುವ ಮಹಿಳಾ ಸಮೃದ್ಧಿ ಯೋಜನೆಯ ಮಾಹಿತಿ: 1.40 ಲಕ್ಷ ರೂ.ವರೆಗೆ ಸಾಲ, 4% ಬಡ್ಡಿದರದಲ್ಲಿ ಮಹಿಳೆಯರಿಗೆ ಅವಕಾಶ
Mahila Samriddhi Yojana
ಮಹಿಳಾ ಸಮೃದ್ಧಿ ಯೋಜನೆAI Image
Updated on

Mahila Samriddhi Yojana: ಸ್ವಂತ ಕಾಲ ಮೇಲೆ ನಿಂತು, ತಮ್ಮದೇ ಆದ ಸಣ್ಣ ವ್ಯಾಪಾರ ಅಥವಾ ಉದ್ಯೋಗ ಪ್ರಾರಂಭಿಸಬೇಕು ಎಂಬ ಕನಸು ಹೊತ್ತಿರುವ ಮಹಿಳೆಯರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ಬಂಡವಾಳದ ಕೊರತೆಯಿಂದ ನಿಮ್ಮ ಕನಸು ಅರ್ಧಕ್ಕೆ ನಿಲ್ಲಬೇಕಿಲ್ಲ. ಯಾಕಂದ್ರೆ, ಅರ್ಹ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲ ಸೌಲಭ್ಯ ಒದಗಿಸುವ ಮಹಿಳಾ ಸಮೃದ್ಧಿ ಯೋಜನೆಯು ಕೇಂದ್ರ ಸರ್ಕಾರದಿಂದ ಲಭ್ಯವಿದೆ. ಸಣ್ಣ ಉದ್ಯಮದಿಂದ ಹಿಡಿದು ಕರಕುಶಲ ಕಲೆಯವರೆಗೆ, ಆದಾಯ ತರುವ ಯಾವುದೇ ಹೊಸ ಹೆಜ್ಜೆಗೆ ಬೆನ್ನೆಲುಬಾಗಿ ನಿಲ್ಲುವ ಈ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ.

ಏನಿದು ಮಹಿಳಾ ಸಮೃದ್ಧಿ ಯೋಜನೆ?

ಮಹಿಳಾ ಸಮೃದ್ಧಿ ಯೋಜನೆ ಅಡಿಯಲ್ಲಿ ಅರ್ಹ ಮಹಿಳೆಯರಿಗೆ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮವು myScheme Portal ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಚಾನೆಲೈಸಿಂಗ್ ಏಜೆನ್ಸಿಗಳ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದು ಸಣ್ಣ ವ್ಯಾಪಾರ, ಕರಕುಶಲತೆ ಅಥವಾ ಯಾವುದೇ ಆದಾಯ ತರುವಂತಹ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುತ್ತದೆ.

ಯೋಜನೆಯ ಪ್ರಮುಖ ಪ್ರಯೋಜನಗಳೇನು?

  • ಗರಿಷ್ಠ ಸಾಲದ ಮೊತ್ತ: ಯೋಜನಾ ವೆಚ್ಚದ 90% ರವರೆಗೆ (ಗರಿಷ್ಠ 1.25 ರಿಂದ 1.40 ಲಕ್ಷ ರೂ.ವರೆಗೆ) ಸಾಲ ಸೌಲಭ್ಯ ಸಿಗುತ್ತದೆ.

  • ಕಡಿಮೆ ಬಡ್ಡಿದರ: ಫಲಾನುಭವಿಗಳಿಗೆ ವಾರ್ಷಿಕ ಕೇವಲ 4% ರಿಂದ 6% ರಷ್ಟು ಅತ್ಯಂತ ಕಡಿಮೆ ಬಡ್ಡಿದರ ಅನ್ವಯವಾಗುತ್ತದೆ.

  • ಮರುಪಾವತಿ ಅವಧಿ: ಪಡೆದ ಸಾಲವನ್ನು ಸುಲಭ ಮಾಸಿಕ ಅಥವಾ ತ್ರೈಮಾಸಿಕ ಕಂತುಗಳಲ್ಲಿ ಮರುಪಾವತಿಸಲು ಕಾಲಾವಕಾಶ ನೀಡಲಾಗುತ್ತದೆ. 

ಅರ್ಜಿ ಸಲ್ಲಿಸಲು ಅರ್ಹತೆ ಏನು?

  • ಲಿಂಗ: ಕೇವಲ ಮಹಿಳಾ ಅರ್ಜಿದಾರರಿಗೆ ಮಾತ್ರ ಈ ಯೋಜನೆ ಸೀಮಿತವಾಗಿದೆ.

  • ವಯೋಮಿತಿ: ಮಹಿಳೆಯರ ವಯಸ್ಸು 18 ರಿಂದ 55 ವರ್ಷದೊಳಗಿರಬೇಕು.

  • ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯವು 3 ಲಕ್ಷ ರೂ. ಮೀರಿರಬಾರದು.

  • ವರ್ಗ: ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗಗಳು (OBC) ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದ್ಯತೆ ಇರುತ್ತದೆ.

  • ಸ್ವಸಹಾಯ ಸಂಘಗಳ (SHG) ಸದಸ್ಯರಾಗಿದ್ದರೆ ಆ ಗುಂಪಿನಲ್ಲೂ ಈ ಯೋಜನೆಯಡಿ ಧನಸಹಾಯ ಪಡೆಯಬಹುದು.

Mahila Samriddhi Yojana
ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಚಿನ್ನ, ಭೂಮಿ ಅಥವಾ ಷೇರುಪೇಟೆ? ಭಾರತೀಯರ ಚಿತ್ತ ಈಗ ಎತ್ತ?

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳೇನು?

  • ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ (Voter ID).

  • ವಾಸಸ್ಥಳ ದೃಢೀಕರಣ ಪತ್ರ (ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್).

  • ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

  • ಬ್ಯಾಂಕ್ ಪಾಸ್‌ಬುಕ್ ವಿವರಗಳು (ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು).

  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.

  • ಸ್ವಸಹಾಯ ಸಂಘದ ಸದಸ್ಯರಾಗಿದ್ದರೆ ಅದರ ಐಡಿ (ಅನ್ವಯಿಸಿದರೆ ಮಾತ್ರ).

ಅರ್ಜಿ ಸಲ್ಲಿಕೆ ಹೇಗೆ?

ಈ ಯೋಜನೆಗೆ ಆಫ್‌ಲೈನ್ ಹಾಗೂ ಆಯಾ ರಾಜ್ಯಗಳ ಚಾನೆಲೈಸಿಂಗ್ ಏಜೆನ್ಸಿಗಳ ನಿರ್ದೇಶನದಂತೆ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಇದರದೊಂದಿಗೆ, ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ KSWDC Portal ಅಥವಾ ಸಂಬಂಧಪಟ್ಟ ನಿಗಮಗಳ ಮೂಲಕ ಇದನ್ನು ಪ್ರಕಟಿಸಲಾಗುತ್ತದೆ. ಜೊತೆಗೆ,

  • ಕಚೇರಿಗೆ ಭೇಟಿ ನೀಡಿ: ನಿಮ್ಮ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ / ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗಳಿಗೆ ಅಥವಾ ಲೀಡ್ ಬ್ಯಾಂಕ್/ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ಭೇಟಿ ನೀಡಬೇಕು.

  • ಅರ್ಜಿ ನಮೂನೆ ಪಡೆಯಿರಿ: ಅಲ್ಲಿ ಸಿಗುವ 'ಮಹಿಳಾ ಸಮೃದ್ಧಿ ಯೋಜನೆ'ಯ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.

  • ವಿವರಗಳನ್ನು ಭರ್ತಿ ಮಾಡಿ: ನಿಮ್ಮ ವೈಯಕ್ತಿಕ ವಿವರಗಳು, ಕೈಗೊಳ್ಳಲು ಉದ್ದೇಶಿಸಿರುವ ಸ್ವಯಂ ಉದ್ಯೋಗ/ವ್ಯಾಪಾರದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

  • ದಾಖಲೆಗಳನ್ನು ಸೇರಿಸಿ: ಮೇಲೆ ತಿಳಿಸಲಾದ ಎಲ್ಲಾ ಅಗತ್ಯ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.

  • ಅರ್ಜಿ ಸಲ್ಲಿಕೆ: ಭರ್ತಿ ಮಾಡಿದ ಅರ್ಜಿಯನ್ನು ಅದೇ ಕಚೇರಿಯಲ್ಲಿ ಸಲ್ಲಿಸಿ. ಅಧಿಕಾರಿಗಳು ನಿಮ್ಮ ದಾಖಲೆಗಳು ಮತ್ತು ಅರ್ಹತೆಯನ್ನು ಪರಿಶೀಲಿಸಿದ ಬಳಿಕ ಸಾಲ ಮಂಜೂರಾತಿ ಪ್ರಕ್ರಿಯೆ ನಡೆಸುತ್ತಾರೆ.

Mahila Samriddhi Yojana
ಕಡಿಮೆ ಪ್ರೀಮಿಯಂ ಅಂತ ಮೋಸ ಹೋಗಬೇಡಿ! ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮುನ್ನ ಈ ವಿಷಯಗಳನ್ನು ಗಮನಿಸಿ; ಇಲ್ಲದಿದ್ರೆ ಹಣ ಲಾಸ್ ಆಗೋದು ಪಕ್ಕಾ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com