

ಬಾಲಿವುಡ್ನಲ್ಲಿ ಆಸ್ತಿಕ ನಟಿಮಣಿಗಳು ಬೆರಳೆಣಿಕೆ. ಅಂಥವರಲ್ಲಿ ಒಬ್ಬರು ಶಿಲ್ಪಾಶೆಟ್ಟಿ. ಮಂಗಳೂರಿನ ತಮ್ಮ ಮನೆಗೆ ಬಂದಾಗ ಹುಟ್ಟೂರಿಗೆ ಬಂದಾಗ ಭೂತದ ಕೋಲದ ಆರಾಧನೆಗಳಿಗಿಯುವ ಶಿಲ್ಪಾ, ಹಾಗೆಯೇ ಸುಬ್ರಮಣ್ಯ- ಧರ್ಮಸ್ಥಳ ಅಂತ ಯಾತ್ರೆ ಹೋಗೋದು ಗೊತ್ತೇ ಇದೆ. ಅಂದಹಾಗೆ, ಶಿಲ್ಪಾ ಈಗ ಕುಂಭಮೇಳದ ಸಂಭ್ರಮದಲ್ಲಿ ಮುಳುಗುತ್ತಿದ್ದಾರೆ.
ಹೌದು, ಇತ್ತೀಚೆಗೆ ಶಿಲ್ಪಾ ಅಲಹಾಬಾದ್ನ ಗಂಗಾ- ಯಮುನಾ ಸಂಗಮದಲ್ಲಿ ಮಿಂದೆದ್ದು ಪಾವನರಾದರು. ಕೊರೆವ ಚಳಿಯಲ್ಲಿ, ತಣ್ಣನೆ ನೀರಿನಲ್ಲಿ ಮೂರು ಬಾರಿ ಮುಳುಗೆದ್ದಾಗ ಉಸಿರು ಕಟ್ಟಿದ ಅನುಭವವಾಗಿದ್ದು ಶಿಲ್ಪಾಗೆ ಇನ್ನೂ ಮರೆಯಲಾಗುತ್ತಿಲ್ಲವಂತೆ.
ಶಿಲ್ಪಾ ದಂಪತಿಯ ಟ್ರಿಪ್ ಮುಗಿದ ಮೇಲೆ ಈಗ ಕುಂಭಮೇಳದತ್ತ ಹೊರಟಿರೋರು ಅಕ್ಷಯ್ ಕುಮಾರ್- ಟ್ವಿಂಕಲ್ ಖನ್ನಾ. ಒಟ್ಟಿನಲ್ಲಿ ಚಿತ್ರನಟರಿಗೆ ಭಕ್ತಿ ಹೆಚ್ಚಾಗುತ್ತಿದೆ. ಚಿತ್ರ ನೂರು ದಿನ ಓಡಲಿ ಅಂತನೋ, ಗೊತ್ತಿಲ್ಲ!