ಖ್ಖಾನ್ ಪುರ

ಮುತ್ತಿನಂಥ ಸುದ್ದಿಯೊಂದು ಬಾಂಬೆ ಬಜಾರಿಂದ ವರದಿಯಾಗಿದೆ. ಬಾಲಿವುಡ್ಡಿನ ಮುತ್ತಿನ ಮನುಷ್ಯ ಇಮ್ರಾನ್ ಹಶ್ಮಿಗೆ ಮುತ್ತಿಕ್ಕಿ...
ಖ್ಖಾನ್ ಪುರ
Updated on: 

ಮುತ್ತಿನಂಥ ಸುದ್ದಿಯೊಂದು ಬಾಂಬೆ ಬಜಾರಿಂದ ವರದಿಯಾಗಿದೆ. ಬಾಲಿವುಡ್ಡಿನ ಮುತ್ತಿನ ಮನುಷ್ಯ ಇಮ್ರಾನ್ ಹಶ್ಮಿಗೆ ಮುತ್ತಿಕ್ಕಿ ಮತ್ತು ಹೆಚ್ಚಿಸಲು ಹೊಸ ಅಧರಗಳ ಒಡತಿ ಧರೆಗಿಳಿದಿದ್ದಾಳೆ. ಹೆಸರು ಅಲಿಸಾ 'ಖ್ಖಾ'ನ್. ಇದೇನಿದು ಸ್ಪೆಲ್ಲಿಂಗ್ ಮಿಸ್ಟೇಕ್ ಅನ್ಕೋಬೇಡಿ. ಇದು ನ್ಯೂಮರಾಲಜಿಯ 2್ಞ ಎಫೆಕ್ಟು. ಹಾಗಾಗಿ ಈಕೆ ಅಲಿಸಾ ಖಾನ್ ಅಲ್ಲ... ಅಲಿಸಾ ಖ್ಖಾನ್! ವಿಕ್ರಮ್‌ಭಟ್‌ರ ಹೊಸ ಬಿಸಿಬಿಸಿ ಚಿತ್ರ 'ಆಯಿನಾ'ದಲ್ಲಿ ಕಿಸ್ಸರ್‌ಬಾಯ್ ಇಮ್ರಾನ್ ಹಶ್ಮಿಯ ತುಟಿಗಳಿಗೆ ಜೊತೆಯಾಗಿರುವ ಅಲಿಸಾ ಫುಲ್ ಥ್ರಿಲ್ ಆಗಿದ್ದಾಳೆ. ವಿಕ್ರಮ್‌ಭಟ್ ಸಿನಿಮಾ ಅಂದರೆ ಅದು ಬಾಲಿವುಡ್ಡಲ್ಲಿ ಹೀರೋಯಿನ್‌ಗೆ ಒಳ್ಳೆ ಲಾಂಚ್‌ಪ್ಯಾಡ್ ಅಂತ ಎಂಥ ಅಮಾಯಕ ನಟಿಗೂ ಗೊತ್ತಿರೋ ವಿಷಯವೇ. ಜೊತೆಗೆ ಇಮ್ರಾನ್ ಹಶ್ಮಿ ಹೀರೋ ಅಂದರೆ ತಲೆ ನಿಲ್ಲೋಕೆ ಸಾಧ್ಯವಾ? 'ಮೈ ಹಸ್ಬೆಂಡ್ಸ್ ವೈಫ್‌' ಮೂಲಕ ಎಂಟ್ರಿ ಕೊಟ್ಟ ಅಲಿಸಾಗೆ ಆ ಹಳೇ ಗಂಡನಿಂದ ನಯಾಪೈಸೆ ಲಾಭ ಆಗ್ಲಿಲ್ಲ.   
ಇಮ್ರಾನ್ ಜೊತೆ ನಟಿಸಾಯ್ತಲ್ಲ, ಇನ್ನೇನಾದ್ರೂ ಆಸೆ ಇದೆಯಾ ಅಂತ ಕೇಳಿ ನೋಡಿ. ಅವಳ ರೇಂಜ್ ಏನು ಅಂತ ನಿಮಗೇ ಅರ್ಥ ಆಗುತ್ತೆ. ಅಲಿಸಾ ನವಾಬರ ವಂಶದವಳಂತೆ. ಹಾಗಾಗಿ ಈ ನವಾಬಿ ನಮ್ಮ ಛೋಟಾನವಾಬ್ ಸೈಫ್ ಅಲಿ ಖಾನ್ ಜೊತೆ ನಟಿಸಲೇಬೇಕು ಅಂತ ಡಿಸೈಡ್ ಮಾಡಿಬಿಟ್ಟಿದಾಳಂತೆ. ಹೊಸಾ ನವಾಬಿ ಕರೀನಾ ಇದನ್ನ ಕೇಳಿದರೆ ಅಲೀಸಾಳನ್ನು ಅಳಿಸದೆ ಬಿಡ್ತಾಳಾ?
ಒಂದೇ ಒಂದು ಸಿನಿಮಾ ಮಾಡ್ಕೊಂಡು ಇಷ್ಟೊಂದ್ ಮಾತಾಡ್ತಾಳಲ್ಲ ಹುಡುಗಿ ಅಂತ ಅನ್ನಿಸೋದು ಹೌದು. ಆದರೆ ಆಕೆಯ ಆತ್ಮವಿಶ್ವಾಸದ ಬಗ್ಗೆ ಕೆಮ್ಮಂಗಿಲ್ಲ. 'ನಾನು ಐಟಂ ಸಾಂಗು, ಸೆಕೆಂಡ್ ಹೀರೋಯಿನ್ನು, ಗೆಸ್ಟ್ ಅಪೀಯರೆನ್ಸು, ಇದನ್ನೆಲ್ಲಾ ಮಾಡೋಕಲ್ಲ ಬಾಲಿವುಡ್ಡಿಗೆ ಬಂದಿರೋದು. ನಾನಿಲ್ಲಿ ಬಂದಿರೋದೆ ನಂ.1 ಹೀರೋಯಿನ್ ಆಗೋದಕ್ಕೆ' ಅಂತ 'ಎದೆ' ತಟ್ಕೊಂಡು ಹೇಳ್ತಾಳೆ ಅಲಿಸಾ. ಪೂನಂ ಪಾಂಡೆ, ಶೆರ್ಲಿನ್ ಛೋಪ್ರಾ ಇವರಿಗೆಲ್ಲ ಹೋಲಿಸಿದರೆ ಭಯಂಕರ ಉರಿದುಕೊಳ್ಳೋ ಅಲಿಸಾ, ಹೋಲಿಸೋ ಆಸೆ ಇದ್ರೆ ಪ್ರಿಯಾಂಕಾ ಛೋಪ್ರಾ ಜೊತೆ ಹೋಲಿಸ್ರಿ ಅಂತ ಆವಾಜ್ ಹಾಕ್ತಾಳೆ. ಆದರೆ ಇದನ್ನ ಯಾರೂ ಕೊಬ್ಬು ಅನ್ನೋ ಹಾಗಿಲ್ಲ. ಹನ್ನೆರಡನೇ ವರ್ಷಕ್ಕೆ ಕ್ಲಾಸಿಕಲ್ ಡ್ಯಾನ್ಸು, ಬೆಲ್ಲಿ ಡ್ಯಾನ್ಸು ಅಂತೆಲ್ಲ ಕಲಿತು ಪೂರ್ತಿ ರೆಡಿಯಾಗಿ ಬಂದಿರುವ, ನೋಡೋಕೂ ಮಾದಕವಾಗಿರುವ ಅಲೀಸಾ ಖ್ಖಾನ್ ಒಂದು ದಿನ ನಂಬರ್ ಒನ್ ಆದರೂ ಅಚ್ಚರಿ ಇಲ್ಲ.

- ನವೀನ್ ಸಾಗರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com