

ಬಾಲಿವುಡ್ನ ಸಿಂಗಂ ಬಹು ಬೇಡಿಕೆಯ ನಟ ಅಜಯ್ ದೇವಗನ್ ತಮ್ಮ ಮೈಕ್ಪೋಬ್ಲಾಗಿಂಗ್ ತಾಣ ಟ್ವಟ್ಟರ್ ಖಾತೆಯನ್ನು ಅವರು ಡಿಲೀಟ್ ಮಾಡಿದ್ದಾರೆ. ಈಗ ಸಾರಿ ಈ ಹೆಸರಿನಿಂದ ಯಾವುದೇ ಖಾತೆ ಇಲ್ಲ ಎಂಬ ಸಂದೇಶ ಬಿತ್ತರವಾಗುತ್ತಿದೆ. ಬಹುತೇಕ ಎಲ್ಲ ಸೆಲಬ್ರಟಿಗಳು ತಮ್ಮ ಚತ್ರಗಳ ಪ್ರಚಾರಕ್ಕೆ ಅಯ್ಕ ಮಾಡಿಕೊಂಡಿರುವ ಸುಲಭದ ಮಾರ್ಗ ಫೇಸ್ಬಕ್ ಹಾಗೂ ಟ್ವಿಟ್ಟರ್ ಅನ್ನು. ಅಭಿಮಾನಿಗಳ ಜತೆ ತಮ್ಮ ಅಭಿಪ್ರಾಯಗಳನ್ನು ಅಂಚಿಕೊಳ್ಳಲಿಕ್ಕೆ, ತಮ್ಮ ಅಭಿನಯದ ಬಗ್ಗೆ ತಿಳಿದುಕೊಳ್ಳಲು ಹಾಗೂ ತಮ್ಮ ಚಿತ್ರಗಳ ಬಗ್ಗೆ ಕ್ಷಣಕ್ಷಣದ ಮಾಹಿತಿ ನೀಡಲು ಸುಲಭದ ದಾರಿಯೆಂದರೆ ಫೇಸ್ ಬುಕ್ ಮತ್ತು ಟ್ವಟ್ಟರ್. ಇದನ್ನು ಮಲಗಂಡೇ ಅಜಯ್ ದೇವಗನ್ ಕೆಲವರ್ಷಗಳ ಹಿಂದೆ ಟ್ವಿಟ್ಟರ್ ಖಾತೆ ತೆರೆದಿದ್ದರು. ಆದರೆ, ಅ.25ರಂದು ತಾನು ಟ್ವಿಟ್ಟರ್ಗೆ ಗುಡ್ ಬೈ ಹೇಳುತ್ತಿರುವುದಾಗಿ ಪ್ರಕಟಿಸಿ, ನಿಮ್ಮ ಪ್ರೀತಿ, ವಿಶ್ವಾಸ ಹೀಗೆ ಮುಂದುವರಿಯಲಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.