ಇಶಾ ಎದುರು ಅಮುಲ್ ಬೇಬಿ

ಬಯ್ಗುಳಗಳಿಂದ ಹಾಗೂ ತನ್ನ ಬೀಪ್‌ಟೋನ್‌ಗಳಿಂದಲೇ ಖ್ಯಾತವಾಗಿರೋ...
ಬಾಲಿವುಡ್ ತಾರೆ ಇಶಾ ಡಿಯೋಲ್‌
ಬಾಲಿವುಡ್ ತಾರೆ ಇಶಾ ಡಿಯೋಲ್‌

ಬಯ್ಗುಳಗಳಿಂದ ಹಾಗೂ ತನ್ನ ಬೀಪ್‌ಟೋನ್‌ಗಳಿಂದಲೇ ಖ್ಯಾತವಾಗಿರೋ ರೋಡೀಸ್ ಕಾರ್ಯಕ್ರಮದಲ್ಲಿ ರೌಡಿಸಂ ತಾರಕ್ಕೇರಿದೆ. ಸ್ಪರ್ಧಿಗಳು ನಿರ್ಣಾಯಕರನ್ನೇ ಹೆದರಿಸುವ ಮಟ್ಟಕ್ಕೂ ಮುಟ್ಟಿದೆ.

ಶುಕ್ರವಾರದ ಆಡಿಶನ್‌ಗೆ ಮುನ್ನ ಅಮೋಲ್ ಸ್ಪೈಕರ್ ಎಂಬ ಸ್ಪರ್ಧಿ ಟ್ವಿಟರ್ ಮೂಲಕ ಇದೇ ಮೊದಲ ಬಾರಿಗೆ ರೋಡೀ ನಿರ್ಣಾಯಕಿಯಾಗಿ ಬಂದಿರುವ ಬಾಲಿವುಡ್ ತಾರೆ ಇಶಾ ಡಿಯೋಲ್‌ಗೆ ಧಮಕಿ ಹಾಕಿದ್ದಾನೆ.

ನನ್ನ ಜೊತೆ ಮಾತಾಡೋಷ್ಟು ಧೈರ್ಯ ಇದ್ರೆ ಜಡ್ಜ್ ಆಗಿ ಬಾ..ಇಲ್ಲಾಂದ್ರೆ ತಲೆ ಬಗ್ಗಿಸ್ಕೊಂಡು ಹೋಗ್ತಾ ಇರು ಎಂಬರ್ಥದ ಟ್ವೀಟ್ ಮಾಡಿ ರೋಡೀಸ್ ವಿನ್ನರ್ ಆಗೋಕೆ ಬೇಕಾದ ಮುಖ್ಯ ಅರ್ಹತೆ ತೋರಿಸಿ ಕೊಂಡಿದ್ದಾನೆ.

ಆದರೆ ಇಶಾ ಡಿಯೋಲ್ ಪಂಜಾಬಿನ ಮಣ್ಣಿನವಲು. ಹೇಳಿಕೇಳಿ ಧರ್ಮೇಂದ್ರ ಪುತ್ರಿ. ಇದಕ್ಕೆಲ್ಲಪ ಹೆದರಿ ಕೂರ್ತಾಳೆಯೇ? ಮೊದಲು ಆತನ ಟ್ವೀಚನ್ನು ನಿರ್ಲಕ್ಷಿಸಿದ್ದಾಳೆ. ಇನ್ನೂ ಅತಿಯಾಗಿ ಆಡಿದರೆ ಅಪ್ಪನ ಸ್ಟೈಲಲ್ಲಿ 'ತೇರಾ ಖೂನ್ ಪೀಯೂಂಗಾ' ಅಂತ ಹೇಳೋಕೂ ರೆಡಿಯಾಗಿದ್ದಾಳೆ. ಶುಕ್ರವಾರದ ಆಡಿಶನ್ನಲ್ಲಿ ಜಡ್ಜಾಗಿ ಇಶಾ ಬಂದದ್ದೂ ಆಗಿದೆ ಅಮೋಲ್‌ನನ್ನು ಕೈ ನೋಡಿಕೊಂಡೂ ಆಗಿದೆಯಂತೆ. ಅಮೋಲ್ ತಣ್ಣಗಾಗಿಜ್ಜಾನೆ. ಇಶಾ ಪಂಜಾಬಿ ಸ್ಟೈಲಲ್ಲಿ ಭಲ್ಲೆ ಭಲ್ಲೆ ಅಂದಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com