
ಬಾಲಿವುಡ್ ನಟಿ ಮಣಿಯರ ಬಿಕಿನಿ ದೇಹಕ್ಕೆ ಮಾರುಹೋಗದವರಿಲ್ಲ. ಈ ಪಟ್ಟಿಗೆ ಇದೀಗ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಸೇರಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮ ಪ್ರತಿನಿಧಿಗಳ ಕೈಗೆ ಸಿಕ್ಕಿದ್ದ ನಟ ಸಿದ್ಧಾರ್ಥ್ ಮಲ್ಹೋತ್ರಾ ಬಾಲಿವುಡ್ ನಟಿ ಮಣಿಯರ ಬಿಕಿನಿ ಸೌಂದರ್ಯ ಕುರಿತು ಹಾಡಿಹೊಗಳಿದ್ದಾರೆ. "ಬಾಲಿವುಡ್ ನಲ್ಲಿ ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರು ಉತ್ತಮ ಬಿಕಿನಿ ದೇಹವನ್ನು ಹೊಂದಿದ್ದಾರೆ" ಎಂದು ಹೇಳಿದ್ದಾರೆ. ಅಚ್ಚರಿ ಎಂದರೆ ಇತ್ತೀಚೆಗೆ ನಟಿ ಆಲಿಯಾ ಭಟ್ ಕೂಡ ತಮ್ಮ ಶಾಂದಾರ್ ಚಿತ್ರಕ್ಕಾಗಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಇದು ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ಈ ಬಗ್ಗೆ ನಟ ಸಿದ್ಧಾರ್ಥ್ ಅವರಲ್ಲಿ ಸುದ್ದಿಗಾರರು ಪ್ರಶ್ನಿಸಿದಾಗ, ನಟ ಸಿದ್ಧಾರ್ಥ್ ಬಹಳ ಚಾಣಾಕ್ಷವಾಗಿಯೇ ಉತ್ತರಿಸಿದರು. "ಶಾಂದಾರ್" ಚಿತ್ರ ಬಹಳ ಚೆನ್ನಾಗಿಯೇ ಮೂಡಿಬಂದಿದೆ. ಚಿತ್ರದಲ್ಲಿ ನಟಿ ಆಲಿಯಾ ಭಟ್ ತುಂಬಾ ಸುಂದರವಾಗಿ ಕಾಣುತ್ತಾರೆ. ನಾನು ಕೂಡ ಆಕೆಯೊಂದಿಗೆ "ಕಪೂರ್ಸ್ ಅಂಡ್ ಸನ್ಸ್" ಚಿತ್ರದಲ್ಲಿ ನಟಿಸುತ್ತಿದ್ದೇನೆ" ಎಂದು ಹೇಳುವ ಮೂಲಕ ಜಾರಿ ಕೊಂಡಿದ್ದಾರೆ.
ನಟ ಸಿದ್ಧಾರ್ಥ ಮಲ್ಹೋತ್ರಾ ಮತ್ತು ನಟಿ ಆಲಿಯಾ ಭಟ್ ಪರಸ್ಪರ ಡೇಟಿಂಗ್ ನಲ್ಲಿದ್ದಾರೆ ಎಂಬ ಊಹಾಪೋಹಗಳು ಕಳೆದ ಕೆಲವು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈವರೆಗೂ ಈ ಇಬ್ಬರು ನಟರು ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.
Advertisement