ಅಮೆರಿಕ ತುಂಬಾ ಪ್ರಿಯಾಂಕಾ ಪೋಸ್ಟರ್!

ಅಮೆರಿಕದ ಟೈಮ್ಸ್ ಸ್ಕ್ವೇರ್ ಅಂದ್ರೆ ಅಲ್ಲಿ ಕಣ್ಣಿಗೆ ಕುಕ್ಕುವುದು ಡಿಜಿಟಲ್ ಪೋಸ್ಟರ್‍ಗಳೇ. ವೈವಿಧ್ಯ ಜಾಹೀರಾತುಗಳು, ರಿಯಾಲಿಟಿ ಶೋಗಳ ಪ್ರಮೋಶ ನ್, ಹಾಲಿವುಡ್ ಸಿನಿಮಾವೊಂದರ 3 ಸೆಕೆಂಡ್ ಟ್ರೈಲರ್ ತುಣುಕು...
ಟೈಮ್ಸ್ ಸ್ಕ್ವೇರ್ ನಲ್ಲಿ ಪ್ರಿಯಾಂಕಾ ಛೋಪ್ರಾ ಪೋಸ್ಟರ್ (ಚಿತ್ರಕೃಪೆ: ಟ್ವಿಟ್ಟರ್)
ಟೈಮ್ಸ್ ಸ್ಕ್ವೇರ್ ನಲ್ಲಿ ಪ್ರಿಯಾಂಕಾ ಛೋಪ್ರಾ ಪೋಸ್ಟರ್ (ಚಿತ್ರಕೃಪೆ: ಟ್ವಿಟ್ಟರ್)

ಅಮೆರಿಕದ ಟೈಮ್ಸ್ ಸ್ಕ್ವೇರ್ ಅಂದ್ರೆ ಅಲ್ಲಿ ಕಣ್ಣಿಗೆ ಕುಕ್ಕುವುದು ಡಿಜಿಟಲ್ ಪೋಸ್ಟರ್‍ಗಳೇ. ವೈವಿಧ್ಯ ಜಾಹೀರಾತುಗಳು, ರಿಯಾಲಿಟಿ ಶೋಗಳ ಪ್ರಮೋಶ ನ್, ಹಾಲಿವುಡ್ ಸಿನಿಮಾವೊಂದರ 3  ಸೆಕೆಂಡ್ ಟ್ರೈಲರ್ ತುಣುಕು... ಹೀಗೆ.

ಕೆಲ ತಿಂಗಳ ಹಿಂದೆ ಪ್ರಧಾನಿ ಮೋದಿಯವರ ಪೋಸ್ಟರುಗಳು ಅಲ್ಲಿ ಮಿಂಚಿ ಮರೆಯಾಗಿದ್ದವು. ಅದುಬಿಟ್ಟರೆ, ಇದುವರೆಗೂ ಯಾವ ಭಾರತೀಯನೂ ಅಲ್ಲಿ ಪೋಸ್ಟರ್ ಆಗಿರಲಿಲ್ಲ. ಅಲ್ಲಿ  ಜಾಹೀರಾತುಗೊಳ್ಳುವ ಸೆಲೆಬ್ರಿಟಿಯೂ ಅಸಾಮಾನ್ಯನೇ ಆಗಿರಬೇಕಾಗಿರುತ್ತದೆ. ಮೇವೆದರ್ ಬಾಕ್ಸಿಂಗಿಗೆ ಬಂದರೆ, ಬರಾಕ್ ಓಬಾಮರ ಭಾಷಣವಿದ್ದರೆ ಹಾಗೊಂದು ಚಾನ್ಸ್ ಇದೆ. ಅದುಬಿಟ್ಟರೆ  ಟೈಮ್ಸ್ ಸ್ಕ್ವೇರ್ ನಲ್ಲಿ ವಿಜೃಂಭಿಸುವುದು ಅವೆಂಜರ್, ಎಕ್ಸ್ಮಾ್ಯನ್, ಸ್ಪೈಡ ಮ್ಯಾನ್, ಹ್ಯಾರಿಪಾಟರ್‍ನಂಥ ಅದ್ಧೂರಿ ಸಿನಿಮಾಗಳು ಬಿಡುಗಡೆಯಾಗುವಾಗ ಕಾಣುವ ಪೋಸ್ಟರ್ಗಳೇ.

ಆದರೆ, ಇದೇ ಮೊದಲ ಬಾರಿಗೆ ಭಾರತೀಯ ನಟಿಯೊಬ್ಬಳು ವಾರಗಟ್ಟಲೆಯಿಂದ ಅಲ್ಲಿ ಜಾಹೀರುಗೊಳ್ಳುತ್ತಿದ್ದಾಳೆ. ಅದು ಪ್ರಿಯಾಂಕಾ ಚೋಪ್ರಾ! ಅಮೆರಿಕದ ಬಹುನಿರೀಕ್ಷಿತ ಟಿವಿ ಶೋ `ಕ್ವಾಂಟಿಕೋ'. 9/11 ಭಯೋತ್ಪಾದನಾ ದಾಳಿಗೆ ಸಂಬಂಧಿಸಿದ ಕಾಲ್ಪನಿಕ ಥ್ರಿಲ್ಲರ್ ಕಥೆ ಇದಾಗಿದ್ದು, ಅದರಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾಳೆ. ಅಲ್ಲವಳು ಅಲೆಕ್ಸ್ ಪೆರಿಶ್ ಎಂಬ  ಎಫ್ ಬಿಐಟ್ರೈನರ್. ಸೆಪ್ಟೆಂಬರ್ 27ಕ್ಕೆ ಈ ಶೋ ಶುರುವಾಗಲಿದೆ. ಈಗಾಗಲೇ ಈ ಶೋನ ಟ್ರೈಲರ್ ಬಿಡುಗಡೆಗೊಂಡು ಅಮೆರಿಕದಲ್ಲಿ ದೊಡ್ಡ ಸುದ್ದಿಯಾಗಿದೆ. ಜೈಲಿನಿಂದ ತಪ್ಪಿಸಿಕೊಂಡ  ಆರೋಪಿಯನ್ನು ಹುಡುಕುವ ಕೆಲಸ ಪ್ರಿಯಾಂಕಾ ಚೋಪ್ರಾಳಿಗೆ. ಟೈಮ್ಸ್ ಸ್ಕ್ವೇರ್ ನ ಈಕೆಯ ಪೋಸ್ಟರ್‍ನಲ್ಲಿ `ದಿ ಫಸ್ಟ್ ಟಾಪ್ ರಿಕ್ರೂಟ್ ಇಸ್ ನೌ ದೇರ್ ಮೋಸ್ಟ್ ವಾಂಟೆಡ್' ಎಂಬ ಗಮನ  ಸೆಳೆಯುವ ಕ್ಯಾಪ್ಷನ್ ಕೊಡಲಾಗಿದೆ. ಈ ಪೋಸ್ಟರ್ಗಳು ಅಮೆರಿಕ 36 ವೃತ್ತಗಳಲ್ಲೂ ಹಾಕಲಾಗಿದೆ. ಅಲ್ಲದೆ, ನ್ಯೂಯಾರ್ಕಿನ ಎಂಟಿಎ ಬಸ್ಗಳಲ್ಲೂ ಪಿಂಕಿಯ ಪೋಸ್ಟರ್ಗಳನ್ನು ಕಾಣಬಹುದು.

ಈಗಾಗಲೇ ನಡೆಯುತ್ತಿರುವ ಶೂಟಿಂಗ್ನಲ್ಲಿ ಪಿಂಕಿಗೆ ಅಭಿಮಾನಿಗಳ ಕಾಟವಂತೆ. ಕೆನಡಾದ ಮಾಂಟ್ರಿಯಲ್ನಲ್ಲಿ ಬೆಳಗ್ಗೆ 5 ಗಂಟೆಯಿಂದ ಈಕೆಯನ್ನು ನೋಡಲು ಕಾದು ಕೂತವರೂ ಇದ್ದಾರಂದ್ರೆ  ಪಿಂಕಿಯ ಪ್ರಭಾವ ಲೆಕ್ಕಹಾಕಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com