ಮಿಲಿಯನ್ ಡಾಲರ್ ಜನ್ನಿಫರ್

ಪಾಪ್ ತಾರೆ ಜೆನ್ನಿಫರ್ ಲೋಪೆಜ್ ಜನಪ್ರಿಯತೆಯ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ...
ಪಾಪ್ ತಾರೆ ಜೆನ್ನಿಫರ್ ಲೋಪೆಜ್
ಪಾಪ್ ತಾರೆ ಜೆನ್ನಿಫರ್ ಲೋಪೆಜ್

ಪಾಪ್ ತಾರೆ ಜೆನ್ನಿಫರ್ ಲೋಪೆಜ್ ಜನಪ್ರಿಯತೆಯ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಅವರ ಒಟ್ಟಾರೆ ಆಸ್ತಿ ಮೌಲ್ಯವೇ ಅಂದಾಜು 400 ಮಿಲಿಯನ್ ಡಾಲರ್ಸ್. ಇಷ್ಟೆಲ್ಲಾ ದುಡ್ಡಿದ್ದರೂ ಹಣ ಸಂಪಾದನೆಗೆ ಯಾವುದೇ ಅವಕಾಶ ಸಿಕ್ಕಿದರೂ ಜೆನ್ನಿಫರ್ ಮಿಸ್ ಮಾಡಿಕೊಳ್ಳಲ್ಲ. ತಮ್ಮ ಫೇಸ್‌ಬುಕ್ ಮೂಲಕ ಆಗಿಂದಾಗ್ಗೆ ತಾಜಾ ಸಮಾಚಾರವನ್ನು ಕೊಡುತ್ತಲೇ ಇರುತ್ತಾರೆ.

ಇತ್ತೀಚೆಗೆ ಕ್ರಿಸ್ಮಸ್ ಪ್ರಯುಕ್ತ ಮಕಾವುನಲ್ಲಿ ಒಂದು ಖಾಸಗಿ ಡಾನ್ಸ್ ಪಾರ್ಟಿಯಲ್ಲಿ ಕೇವಲ 40 ನಿಮಿಷ ತಮ್ಮ ಮೈ ಬಳುಕಿಸಿ ಅವರು ಪಡೆದದ್ದು ಬರೋಬ್ಬರಿ 1.75 ಮಿಲಿಯನ್ ಡಾಲರ್   (ರು.11 ಕೋಟಿಗೂ ಅಧಿಕ).

45 ಹರೆಯದ ಜೆನ್ನಿಫರ್ ಈಗಲೂ ತಮ್ಮ ಸೆಕ್ಸಿ ಲುಕ್ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಇದುವರೆಗೂ ಜೆನ್ನಿಫರ್ ಮೂರು ಸಲ ಮದುವೆಯಾಗಿ ವಿಚ್ಛೇದನವನ್ನೂ ಪಡೆದಿದ್ದಾರೆ. 'ಪ್ರೀತಿ, ಪ್ರೇಮ ವಿಚಾರದಲ್ಲಿ ಸಾಕಷ್ಟು ಎಡವಿದೆ' ಎಂದು ಪಶ್ಚಾತಾಪವನ್ನೂ ಪಟ್ಟಿದ್ದಾರೆ. ತನ್ನ ಮಕ್ಕಳಿಗೆ ತಂದೆ ಇಲ್ಲವಲ್ಲಾ ಎಂಬ ನೋವು ಅವರನ್ನು ಕಾಡುತ್ತಿದೆಯಂತೆ. ಆದರೆ ಮೂರು ಮದುವೆಗಳು ಮುರಿದುಬಿದ್ದರೂ ನಾಲ್ಕನೇ ಮದುವೆಗೆ ಜೆನ್ನಿಫರ್ ಮುಂದಾಗಿದ್ದರು ಎಂಬ ಸುದ್ದಿಯೂ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com