ಶಬ್ ಮಸ್ತು ರವೀನಾ

ಮಸ್ತ್ ಮಸ್ತ್ ಹುಡುಗಿ ರವೀನಾ ಮತ್ತೆ ಶಬ್ದ ಮಾಡುತ್ತಿದ್ದಾಳೆ. ಹೌದು.. ಮೂರು ವರ್ಷದ ನಂತರ ಶಬ್ದ ಎಂಬ...
ರವೀನಾ ಟಂಡನ್
ರವೀನಾ ಟಂಡನ್

ಮಸ್ತ್ ಮಸ್ತ್ ಹುಡುಗಿ ರವೀನಾ ಮತ್ತೆ ಶಬ್ದ ಮಾಡುತ್ತಿದ್ದಾಳೆ. ಹೌದು.. ಮೂರು ವರ್ಷದ ನಂತರ ಶಬ್ದ ಎಂಬ ಸಿನಿಮಾದ ಮೂಲಕ ಬಾಲಿವುಡ್ ಮರುಪ್ರವೇಶ ಮಾಡುತ್ತಿದ್ದಾಳೆ.

ಅನಿಲ್ ತಡಾನಿ ಜೊತೆ ಮದುವೆಯಾಗಿ ಮಕ್ಕಳ ತಾಯಿಯಾಗಿದ್ದಲ್ಲದೆ ಎರಡು ಮಕ್ಕಳನ್ನು ದತ್ತು ತಗೊಂಡು ಚಿತ್ರರಂಗದಾಚೆ ಸುದ್ದಿಯಲ್ಲಿದ್ದ ರವೀನಾಗೆ ಬಣ್ಣದ ವ್ಯಾಮೋಹವೇನೂ ಹೋಗಿಲ್ಲ. 2004ರಲ್ಲಿ ಒಮ್ಮೆ ರೀ ಎಂಟ್ರಿ ತಗೊಂಡಿದ್ದ ರವೀನಾ ಶೋಭನಾ ಸೆವೆನ್ ನೈಟ್ಸ್ ಎಂಬ ಚಿತ್ರದಲ್ಲಿ ನಟಿಸಿದ್ದಳು.

ಆದರೆ ಆ ಚಿತ್ರ ಚಿತ್ರೋತ್ಸವಗಳಿಗೆ ಸೀಮಿತವಾಗಿತ್ತು. ಹತ್ತುವರ್ಷಗಳ ನಂತರ ನಟಿಸುತ್ತಿರುವ ಈ ಚಿತ್ರದ ಕಥೆ ಹದಿನಾಲ್ಕು ವರ್ಷ ಹಿಂದೆಯೇ ಚರ್ಚಿಸಲಾಯಿತಂತೆ. ದಮನ್ ಚಿತ್ರದ ಅಸೋಸಿಯೇಟ್  ಓನಿರ್ ಅಂದು ಹೇಳಿದ ಕಥೆ ಇಂದು ಚಿತ್ರವಾಗುತ್ತಿದೆ. ದಮನ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಗಳಿಸಿದ್ದ ರವೀನಾ ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಗೆ ಟ್ವಿಸ್ಟ್ ಕೊಡುವ ವಿಲನ್ ಪಾತ್ರವಂತೆ. ಪ್ರಸೊನ್‍ಜಿತ್ ಚಟರ್ಜಿಯ ಪತ್ನಿ ಅರ್ಪಿತಾ ಮತ್ತು ಆಶಿಶ್ ಬಿಷ್ಟ್  ನಟಿಸುತ್ತಿರುವ ಈ ಚಿತ್ರ ದೆಹಲಿಯಲ್ಲಿ ನಡೆದ ನೈಜಘಟನೆ ಆಧಾರಿತ ಎಂಬ ಸುದ್ದಿಯಿದೆ. ?

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com