ಶಾಹಿದ್‌ಗೆ ಮೀರಾಳಂತ ಹುಡುಗಿ ಬೇಕಿತ್ತು: ನೀಲಿಮಾ ಅಝೀಮ್

ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ತಾಯಿ ನೀಲಿಮಾ ಅಝೀಮ್ ಅವರು ಮೀರಾ ರಜಪೂತ್‌ಳನ್ನು ಸೊಸೆಯಾಗಿ ಪಡೆದಿದ್ದಕ್ಕೆ ತುಂಬಾ...
ಶಾಹಿದ್ ಕಪೂರ್ - ಮೀರಾ ರಜಪೂತ್‌
ಶಾಹಿದ್ ಕಪೂರ್ - ಮೀರಾ ರಜಪೂತ್‌

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ತಾಯಿ ನೀಲಿಮಾ ಅಝೀಮ್ ಅವರು ಮೀರಾ ರಜಪೂತ್‌ಳನ್ನು ಸೊಸೆಯಾಗಿ ಪಡೆದಿದ್ದಕ್ಕೆ ತುಂಬಾ ಖುಷಿಯಾಗಿದ್ದಾರೆ. ಅಲ್ಲದೆ ತನ್ನ ಮಗನಿಗೆ ಮೀರಾಳಂತಹ ಹುಡುಗಿಯೇ ಬೇಕಾಗಿತ್ತು ಎಂದು ಹೇಳಿದ್ದಾರೆ.

ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ನಿನ್ನೆ ರಾತ್ರಿ ಶಾಹಿದ್ ಹಾಗೂ ಮೀರಾಳ ಅದ್ಧೂರಿ ಆರತಕ್ಷತೆ ನಡೆಯಿತು. ಈ ಸಮಾರಂಭದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್, ಸೋನಂ ಕಪೂರ್, ಕಂಗನಾ ಹಾಗೂ ಅರ್ಜುನ್ ಕಪೂರ್ ಸೇರಿದಂತೆ ಹಲವು ತಾರೆಯರು ಭಾಗವಹಿಸಿದ್ದರು.

ಈ ವೇಳೆ ' ಸುದ್ದಿಗಾರರೊಂದಿಗೆ ತಮ್ಮ ಖುಷಿ ಹಂಚಿಕೊಂಡ ಹಿರಿಯ ನಟ ಪಂಕಜ್ ಕಪೂರ್ ಅವರ ಪತ್ನಿ ಹಾಗೂ ಶಾಹಿದ್ ತಾಯಿ ನೀಲಿಮಾ, ಶಾಹಿದ್ ಅದ್ಭುತ ಹೃದಯದೊಂದಿಗೆ ಗೌರವಯುತ ಮತ್ತು ಸುಂದರಿ ಹುಡಿಗಿಯೊನ್ನು ಪತ್ನಿಯಾಗಿ ಪಡೆದಿದಕ್ಕೆ ತುಂಬಾ ಖುಷಿಯಾಗಿದೆ ಎಂದಿದ್ದಾರೆ.

ಮೀರಾ ಒಂದು ಉತ್ತಮ ಕುಟುಂಬದಿಂದ ಬಂದಿದ್ದಾಳೆ ಮತ್ತು ಅವರು ತುಂಬಾ ಒಳ್ಳೆಯ ಜನ. ಶಾಹಿದ್‌ಗೆ ಇಂತಹ ಹುಡುಗಿಯನ್ನೇ ನಾನು ಹುಡುಕುತ್ತಿದ್ದೆ. ಈಗ ಅಂತಹ ಹುಡುಗಿ ಸಿಕ್ಕಿದ್ದಾಳೆ. ಹೀಗಾಗಿ ನನಗೆ ತುಂಬಾ ಖುಷಿಯಾಗುತ್ತಿದೆ' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com