

ಮುಂಬೈ: ಬಾಲಿವುಡ್ ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿರುವ ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯಿಜಾನ್' ಚಿತ್ರ ಕೇವಲ ಐದೇ ದಿನದಲ್ಲಿ 150 ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ.
ಅಮೀರ್ ಖಾನ್ ರ ಪಿಕೆ ಚಿತ್ರದ ಹಾಗೂ ಶಾರೂಕ್ ಖಾನ್ ರ ಹ್ಯಾಪಿ ನ್ಯೂ ಇಯರ್ ಚಿತ್ರಗಳ ದಾಖಲೆಗಳನ್ನು ಅಳಿಸಿಹಾಕಿರುವ ಭಜರಂಗಿ ಭಾಯಿಜಾನ್ ಮೊದಲ 3 ದಿನದಲ್ಲೇ 100 ಕೋಟಿ ಕ್ಲಬ್ ಗೆ ಸೇರ್ಪಡೆಗೊಂಡಿತ್ತು. ಈಗ ಐದು ದಿನದಲ್ಲಿ 150 ಕೋಟಿ ಕ್ಲಬ್ ಸೇರಿ ಹೊಸ ದಾಖಲೆ ಬರೆದಿದೆ.
ಜುಲೈ 17ರಂದು ದೇಶಾದ್ಯಂತ ಸುಮಾರು 5 ಸಾವಿರಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಭಜರಂಗಿ ಭಾಯಿಜಾನ್ ತೆರೆಕಂಡಿತ್ತು.
ಸಲ್ಮಾನ್ ಹೆಸರಲ್ಲಿ ಇದೀಗ ಹೊಸ ದಾಖಲೆಗೆ ಸೃಷ್ಠಿಯಾಗಿದೆ. 100 ಕೋಟಿ ರು. ಗಳಿಸಿದ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹಿಂದಿ ನಟ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ವಾಂಟೆಡ್, ದಬಾಂಗ್, ರೆಡಿ, ದಬಾಂಗ್ 2, ಏಕ್ ಥಾ ಟೈಗರ್, ಕಿಕ್ ಚಿತ್ರಗಳು 100 ಕೋಟಿ ವಹಿವಾಟು ನಡೆಸಿದ ಚಿತ್ರಗಳು.