ಚೀನಾ ಬಾಕ್ಸ್ ಆಫೀಸ್ ನಲ್ಲೂ ದಾಖಲೆ ಬರೆದ ಪಿಕೆ

ಕಳೆದ ವರ್ಷ ತೆರೆಕಂಡಿದ್ದ ಆಮೀರ್ ಖಾನ್-ಅನುಷ್ಕಾ ಶರ್ಮಾ ಅಭಿನಯದ ಪಿಕೆ ಚಿತ್ರ ಇದೀಗ ಚೀನಾ ಬಾಕ್ಸ್ ಆಫೀಸ್ ನಲ್ಲಿಯೂ ಭಾರಿ ಸದ್ದು ಮಾಡಿದೆ...
ಪಿಕೆ ಚಿತ್ರ
ಪಿಕೆ ಚಿತ್ರ

ಶಾಂಘೈ: ಕಳೆದ ವರ್ಷ ತೆರೆಕಂಡಿದ್ದ ಆಮೀರ್ ಖಾನ್-ಅನುಷ್ಕಾ ಶರ್ಮಾ ಅಭಿನಯದ ಪಿಕೆ ಚಿತ್ರ ಇದೀಗ ಚೀನಾ ಬಾಕ್ಸ್ ಆಫೀಸ್ ನಲ್ಲಿಯೂ ಭಾರಿ ಸದ್ದು ಮಾಡಿದೆ.

ಕಳೆದ ಮೇ 22ರಂದು ಚೀನಾದಲ್ಲಿ ಸುಮಾರು 4600 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದ ಪಿಕೆ ಚಿತ್ರ ಕೇವಲ 16 ದಿನಗಳಲ್ಲಿ 100 ಕೋಟಿ ಗಳಿಕೆ ಮಾಡುವ ಮೂಲಕ ನೂತನ ದಾಖಲೆ ನಿರ್ಮಿಸಿದೆ. ಆ ಮೂಲಕ ಚೀನಾದಲ್ಲಿ 100 ಕೋಟಿ ಗಳಿಕೆ ಮಾಡಿದ ಮೊದಲ ಭಾರತೀಯ ಸಿನಿಮಾ ಎಂಬ ಖ್ಯಾತಿ ಪಿಕೆ ಚಿತ್ರಗಳಿಸಿದೆ.

ಕಳೆದ ವರ್ಷ ತೆರೆಕಂಡು ಮೆಗಾ ಹಿಟ್ ಎನಿಸಿಕೊಂಡಿದ್ದ ‘ಪಿಕೆ’ ಭಾರತದ ಬಾಕ್ಸ್ ಅಫೀಸ್​ನಲ್ಲಿ ಭಾರಿ ಗಳಿಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಇದುವರೆಗೂ ವಿಶ್ವಾದ್ಯಾಂತ ಈ ಚಿತ್ರ ಗಳಿಸಿದ ಒಟ್ಟು ಮೊತ್ತ 700 ಕೋಟಿಗೂ ಅಧಿಕ. ಇದೀಗ ಚೀನಾದಲ್ಲಿಯೂ ‘ಪಿಕೆ’ ಚಿತ್ರ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದು, ಭಾರತೀಯ ಚಿತ್ರವೊಂದು ಇಲ್ಲಿನ ಸಿನಿ ಮಾರುಕಟ್ಟೆಯಲ್ಲಿ 100 ಕೋಟಿ ರೂ. ಕಮಾಯಿ ಮಾಡುವ ಮೂಲಕ ‘ಶತಕೋಟಿ ಕ್ಲಬ್’ ಸೇರಿ ಹೊಸ ದಾಖಲೆ ಸೃಷ್ಟಿಸಿದೆ. ಚೀನಾದ ಸುಮಾರು 4600 ಪರದೆಗಳಲ್ಲಿ ಮೇ 22ರಂದು ತೆರೆಕಂಡಿದ್ದ ಆಮಿರ್ ಖಾನ್ ಅವರ ಈ ಚಿತ್ರ ಆರಂಭದ ನಾಲ್ಕು ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ ರು. 40.48 ಕೊಟಿ ಆಗಿತ್ತು.

ಆಗಲೇ ಚಿತ್ರ ತಜ್ಞರು ಈ ಚಿತ್ರ ಚೀನಾದಲ್ಲಿ ದಾಖಲೆ ನಿರ್ಮಿಸಲಿದೆ ಎಂದು ಅಂದಾಜಿಸಿದ್ದರು. ಇದೀಗ ಪಿಕೆ ಚಿತ್ರ ಆ ಸಾಧನೆಯನ್ನೂ ಮೀರಿದ್ದು, ತಾಜಾ ಮಾಹಿತಿಯನ್ವಯ ಈ ಚಿತ್ರವೀಗ ಚೀನಾದಲ್ಲಿ ಒಟ್ಟು 101.81 ಕೋಟಿ ರೂ. ಗಳಿಕೆ ಕಾಣುವ ಮೂಲಕ ವಿದೇಶದಲ್ಲೂ ತನ್ನ ಪರಾಕ್ರಮ ಮುಂದುವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com