ಪುಸ್ತಕ ಬರೆಯಲು ಹೊರಟಿದ್ದಾಳೆ ನಟಿ ಶಿಲ್ಪಾ ಶೆಟ್ಟಿ

ಪಿಟ್ನೆಸ್ ಬಗ್ಗೆ ಡಿವಿಡಿ ಬಿಡುಗಡೆ ಮಾಡಿದ ನಂತರ ಭಾರತೀಯ ಆಹಾರ ಪದ್ದತಿ ಮಹತ್ವ ತಿಳಿಸಲು ಆರೋಗ್ಯ ಮತ್ತು ಪೌಷ್ಟಿಕಾಂಶ ಎಂಬ ಪುಸ್ತಕ ಬರೆಯಲು ಬಾಲಿವುಡ್ ನಟಿ ...
ನಟಿ ಶಿಲ್ಪಾ ಶೆಟ್ಟಿ
ನಟಿ ಶಿಲ್ಪಾ ಶೆಟ್ಟಿ

ನವದೆಹಲಿ: ಪಿಟ್ನೆಸ್ ಬಗ್ಗೆ ಡಿವಿಡಿ ಬಿಡುಗಡೆ ಮಾಡಿದ ನಂತರ ಭಾರತೀಯ ಆಹಾರ ಪದ್ದತಿ ಮಹತ್ವ ತಿಳಿಸಲು ಆರೋಗ್ಯ ಮತ್ತು ಪೌಷ್ಟಿಕಾಂಶ ಎಂಬ ಪುಸ್ತಕ ಬರೆಯಲು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಿದ್ಧತೆ ನಡೆಸಿದ್ದಾರೆ.

ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಆಹಾರ ಮತ್ತು ಪೌಷ್ಠಿಕಾಂಶಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಕುರಿತಾಗಿ ಬರೆಯಲು ನಾನು ಉತ್ಸುಕಳಾಗಿದ್ದೇನೆ ಎಂದು ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ.

ಕ್ರಮಬದ್ದವಾದ ಡಯಟ್ ಇಲ್ಲದೇ ಏನೇ ಮಾಡಿದರೂ ಅದು ವ್ಯರ್ಥವಾಗುತ್ತದೆ. ಹೀಗಾಗಿ  ಯಾವ ಸಮಯದಲ್ಲಿ ತಿನ್ನಬೇಕು, ಏನನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಅತ್ಯದ್ಭುತವಾಗಿರುವ ಭಾರತೀಯ ಆಹಾರ
ಗಳನ್ನು ಜನ ಮರೆತಿದ್ದಾರೆ. ಅದರ ಬಗ್ಗೆ ಪುಸ್ತಕದಲ್ಲಿ ಬರೆಯವುದಾಗಿಯೂ ಅವರು ತಿಳಿಸಿದರು.
ಇನ್ನು ಯೋಗ ತನ್ನ ಜೀವನದ ಅವಿಭಾಜ್ಯ ಅಂಗ.  ಯೋಗ ತನ್ನ ಜೀವನ ಶೈಲಿಯನ್ನೇ ಬದಲಾಯಿಸಿತು ಎಂದು ಶಿಲ್ಪಾ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾಳೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com