ಆಶಾ ಭೋಸ್ಲೆ ಸರ್ವಕಾಲಿಕ ಶ್ರೇಷ್ಠ ಹಿನ್ನಲೆ ಗಾಯಕಿ

ಗಾಯಕಿ ಆಶಾ ಭೋಸ್ಲೆ ಅವರು ಬಾಲಿವುಡ್‍ನ ಶ್ರೇಷ್ಠ ಹಿನ್ನಲೆ ಗಾಯಕಿ ಎಂದು ಬ್ರಿಟನ್ ಮೂಲದ ಈಸ್ಟರ್ನ್ ಐ ಪತ್ರಿಕೆಯು ಘೋಷಿಸಿದೆ.
ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ
ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ
ಲಂಡನ್: ಗಾಯಕಿ ಆಶಾ ಭೋಸ್ಲೆ ಅವರು ಬಾಲಿವುಡ್‍ನ ಶ್ರೇಷ್ಠ ಹಿನ್ನಲೆ ಗಾಯಕಿ ಎಂದು ಬ್ರಿಟನ್ ಮೂಲದ ಈಸ್ಟರ್ನ್ ಐ ಪತ್ರಿಕೆಯು ಘೋಷಿಸಿದೆ.
ಗಾಯಕರು ಹಾಡಿದ ಹಾಡುಗಳು, ಪ್ರಶಸ್ತಿಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಖ್ಯಾತಿ, ಬಹುಮುಖ ಸಾಮರ್ಥ್ಯ, ಅಭಿಮಾನಿ ಬಳಗ, ಇತರೆ ಗಾಯಕರ ಪೈಕಿ ಖ್ಯಾತಿ ಸೇರಿದಂತೆ ಹಲವು ಅಂಶಗಳ ಆಧಾರದಲ್ಲಿ ಗಾಯಕರ ಪಟ್ಟಿಯನ್ನು ತಯಾರಿಸಲಾಗಿತ್ತು. ಈ ಪಟ್ಟಿಯಲ್ಲಿ ಆಶಾ ಅವರು ತಮ್ಮ ಸಹೋದರಿ ಲತಾ ಮಂಗೇಶ್ಕರ್‍ರನ್ನು ಮೀರಿ ಶ್ರೇಷ್ಠ ಹಿನ್ನಲೆ ಗಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲತಾ ಅವರು 2ನೇ ಸ್ಥಾನ ಪಡೆದಿದ್ದು, ಮೊಹಮ್ಮದ್ ರಫೀ ಮತ್ತು ಕಿಶೋರ್ ಕುಮಾರ್ ಕ್ರಮವಾಗಿ 3 ಮತ್ತು 4ನೇ ಸ್ಥಾನ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com