ಲೀಸಾ-ರೇ ಆಫ್ ಹೋಪ್

ಅನಿವಾಸಿ ಭಾರತೀಯ ನಟಿ ಲೀಸಾ ರೇ ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳತೊಡಗಿದ್ದಾಳೆ. ಕಳೆದ ಇಪ್ಪತ್ತು ವರ್ಷದಿಂದ ಮಾಡೆಲಿಂಗ್, ಟೆಲಿಶೋಸ್ ಹಾಗೂ ಸಿನಿಮಾಗಳಲ್ಲಿ ಹೆಸರು ಮಾಡಿರುವ ಲೀಸಾ, ಕ್ಯಾನ್ಸರ್ ಪೀಡಿತಳಾಗಿದ್ದು ಗೊತ್ತಿರುವ ಸುದ್ದಿ....
ನಟಿ ಲೀಸಾ ರೇ
ನಟಿ ಲೀಸಾ ರೇ

ಅನಿವಾಸಿ ಭಾರತೀಯ ನಟಿ ಲೀಸಾ ರೇ ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳತೊಡಗಿದ್ದಾಳೆ. ಕಳೆದ ಇಪ್ಪತ್ತು ವರ್ಷದಿಂದ ಮಾಡೆಲಿಂಗ್, ಟೆಲಿಶೋಸ್ ಹಾಗೂ ಸಿನಿಮಾಗಳಲ್ಲಿ ಹೆಸರು ಮಾಡಿರುವ ಲೀಸಾ, ಕ್ಯಾನ್ಸರ್ ಪೀಡಿತಳಾಗಿದ್ದು ಗೊತ್ತಿರುವ ಸುದ್ದಿ.

ಐದು ವರ್ಷ ಕ್ಯಾನ್ಸರ್ ಎದುರು ಹೋರಾಡಿ ಜಯಿಸಿ ಬಂದಿರುವ ಲೀಸಾ, ಮತ್ತೆ ತನ್ನ ಸಾಮಾನ್ಯ ದಿನಚರಿಗೆ ಬಂದಿದ್ದಾಳಂತೆ.  ಕ್ಯಾನ್ಸರ್ ಬಗ್ಗೆ ಇರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ಹೊಡೆದೋಡಿಸಬೇಕು ಎಂದು ತೀರ್ಮಾನಿಸಿರುವ ಲೀಸಾ ಈಗ ಅದಕ್ಕಾಗಿಯೇ ಹೋದಲ್ಲೆಲ್ಲ ಈ ಜಾಗೃತಿಯ ಮಾತುಗಳನ್ನಾಡಿಲಾರಂಭಿಸಿದ್ದಾಳೆ.

ಜನ ಕ್ಯಾನ್ಸರ್ ಪೀಡಿತರನ್ನು ಪ್ರತ್ಯೇಕವಾಗಿ ಅನುಕಂಪದಿಂದ ನೋಡುವುದು ಸಲ್ಲ ಎನ್ನುವ ಲೀಸಾ, ದೆಹಲಿಯಲ್ಲಿ ಜನ ತನ್ನನ್ನು ಹಾಗೆ ನೋಡುತ್ತಿದ್ದುದನ್ನು ಗಮನಿಸಿದ್ದಾಳೆ. ಕೀಮೋ ಥೆರಪಿಯಿಂದ ಕೂದಲು ಉದುರುವ ಮೊದಲೇ ತಾನೇ ಸ್ಟೈಲ್ ಎಂಬಂತೆ ಕ್ಲೀನ್ ಶೇವ್ ಮಾಡಿಕೊಂಡ ಬಗ್ಗೆ ಹೇಳುವ ಲೀಸಾ, ಇದನ್ನು ಕೂಡ ತನ್ನ ಬಗ್ಗೆ ಯಾರೂ ಅನುಕಂಪ ತೋರಬಾರದೆಂದು ಸ್ಟೈಲ್ ಎಂಬಂತೆ ಬಿಂಬಿಸಿಕೊಂಡೆ ಎನ್ನುತ್ತಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com