ಇದು ಸುನಂದಾ ಜೀವನದ ಗೇಮ್?

ಕನ್ನಡ ಮತ್ತು ತಮಿಳು ದ್ವಿಭಾಷೆ ಚಿತ್ರ `ಗೇಮ್'ನಲ್ಲಿ ನೇಪಾಳಿ ಬೆಡಗಿ ಮನಿಷಾ ಕೋಯಿರಾಲ ಆಡ್ತಾಳೆ ಅನ್ನೋದು ಹಳೇ ಸುದ್ದಿ. ಮನಿಷಾ ಕೊಲೆ ಆಗ್ತಾಳೆ...
ಮನಿಷಾ ಕೋಯಿರಾಲ
ಮನಿಷಾ ಕೋಯಿರಾಲ

ಕನ್ನಡ ಮತ್ತು ತಮಿಳು ದ್ವಿಭಾಷೆ ಚಿತ್ರ `ಗೇಮ್'ನಲ್ಲಿ ನೇಪಾಳಿ ಬೆಡಗಿ ಮನಿಷಾ ಕೋಯಿರಾಲ ಆಡ್ತಾಳೆ ಅನ್ನೋದು ಹಳೇ ಸುದ್ದಿ. ಮನಿಷಾ ಕೊಲೆ ಆಗ್ತಾಳೆ.

ಆ ಪ್ರಕರಣವನ್ನು ಭೇದಿಸಲು ಸಿನಿಮಾದಲ್ಲಿ ಅರ್ಜುನ್ ಸರ್ಜಾ ಎಂಟ್ರಿ ಕೊಡ್ತಾರೆ ಎಂಬ ಸುಳಿವು ಯಾವಾಗ ಸಿಕ್ಕಿತೋ, `ಗೇಮ್' ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಜೀವನದ ಗೇಮಿನ ಕಥೆಯಾ ಎಂಬ ಗುಮಾನಿ ಈಗ ಸ್ಯಾಂಡಲ್‍ವುಡ್ ಹಾಗೂ ಕಾಲಿವುಡ್‍ನಲ್ಲಿ ಹುಟ್ಟಿದೆ.

ಈ ಸಿನಿಮಾ ಐಪಿಎಲ್ ಬೆಟ್ಟಿಂಗ್‍ಗೆ ಸಂಬಂಧಿಸಿದ್ದು  ಎನ್ನಲಾಗುತ್ತಿತ್ತು. ಈಗ ಸಾವಿನ ಸುಳಿವು ಸಿಗುತ್ತಿದ್ದಂತೆ ಸುನಂದಾ ಸೋತ ವ್ಯಥೆಯ ಕಥೆ ಎನಿಸುತ್ತಿದೆ. ಅದರ ಹಿಂದೆಯೇ ವಿವಾದವೂ ಹುಟ್ಟಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. ಸುನಂದಾ ಪಾತ್ರಕ್ಕೆ ಮನಿಷಾ ಜೀವ ತುಂಬಿದರೆ, ಶಶಿ ಪಾತ್ರಕ್ಕೆ ತಮಿಳಿನ ಶ್ಯಾಂ ಜೀವ ತುಂಬಲಿದ್ದಾರಂತೆ. ಕಥೆ, ಚಿತ್ರ ಮುಂತಾದ ಬಗ್ಗೆ ಗುಸು ಗುಸು ಕೇಳಿ ಬಂದರೂ, ನಿರ್ದೇಶಕರು ಮಾತ್ರ ಈ ಬಗ್ಗೆ ಏನೂ ಹೇಳಲಿಲ್ಲವಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com