ರೈತರಿಗೆ ಸಹಾಯ ಮಾಡಿ ಎಂದು ಜನರಿಗೆ ಕರೆಕೊಟ್ಟ ನಟ ನವಾಜುದ್ದೀನ್

ರೈತನ ಮಗ, ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ, ರೈತರ ಬವಣೆಗಳ ಬಗ್ಗೆ ಅರಿವಿದೆ ಎಂದಿದ್ದು ರೈತರಿಗೆ ಸಹಾಯ ಮಾಡುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ
Updated on

ಮುಂಬೈ: ರೈತನ ಮಗ, ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ, ರೈತರ ಬವಣೆಗಳ ಬಗ್ಗೆ ಅರಿವಿದೆ ಎಂದಿದ್ದು ರೈತರಿಗೆ ಸಹಾಯ ಮಾಡುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

'ಗ್ಯಾಂಗ್ಸ್ ಆಫ್ ವಸೀಪುರ್', 'ಕಿಕ್', ಮತ್ತು 'ಭಜರಂಗಿ ಭಾಯಿಜಾನ್' ಸಿನೆಮಾಗಳಲ್ಲಿ ನೀಡಿರುವ ಅದ್ಭುತ ನಟನೆಗಾಗಿ ಹೆಸರುವಾಸಿಯಾಗಿರುವ ನಟ ದೇಶದ ರೈತರಿಗೆ ಧನಸಹಾಯ ಮಾಡಲು ಕೈಜೋಡಿಸುವಂತೆ ಜನರಿಗೆ ಕರೆ ನೀಡಿದ್ದಾರೆ.

"ನಾನು ರೈತನ ಮಗ. ಅವರು ಎದುರಿಸುವ ಕಷ್ಟಗಳು ನನಗೆ ಗೊತ್ತಿವೆ. ಆದುದರಿಂದ ನಾನು #ಸೀಡ್ ದ ರೈಸ್ ಸಂಸ್ಥೆಯನ್ನು ಬೆಂಬಲಿಸುತ್ತಿದ್ದೇನೆ. ರೈತರಿಗೆ ದಾನ ಮಾಡಲು ನನ್ನ ಜೊತೆಗೆ ಕೈಜೋಡಿಸಿ" ಎಂದು ನವಾಜುದ್ದೀನ್ ಟ್ವೀಟ್ ಮಾಡಿದ್ದರೆ.

ಭಾರತದಾದ್ಯಂತ ರೈತರಿಗೆ ಸಹಾಯ ಮಾಡಲು ಈ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಇದರ ಅಧಿಕೃತ ಅಂತರ್ಜಾಲ ಪುಟದಲ್ಲಿ "ಹವಾಮಾನ ಮತ್ತು ನಮ್ಮ ಉದಾಸೀನತೆಯಿಂದ ಈ ಪುರುಷರು ಮತ್ತು ಮಹಿಳೆಯರು ಪ್ರತಿ ದಿನ ನರಳುತ್ತಿದ್ದಾರೆ ಮತ್ತು ಹೋರಾಡುತ್ತಿದ್ದಾರೆ. ಇನ್ನು ಮುಂದೆ ಹಾಗಾಗಬೇಕಿಲ್ಲ.

"ನಾವೆಲ್ಲಾ ಒಟ್ಟಿಗೆ ಸ್ವಲ್ಪ ಧನ ಸಹಾಯ ಮಾಡುವ ಮೂಲಕ ಇವರ ಜೀವನದಲ್ಲಿ ಬದಲಾವಣೆ ತರಬಹುದು. ಆದುದರಿಂದ ರೈತರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿ ಮತ್ತು ಅವರು ತಲೆ ಎತ್ತಿ ನಿಲ್ಲುವಂತೆ ಮಾಡಿ" ಎಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com