
ಇಂಡಿಯನ್ ಡೈರೆಕ್ಟರ್, ಪಾಕ್ ಹೀರೋಯಿನ್- ಇದು ಇಲ್ಲಿಯ ತನಕ ಆಗಿದ್ದು. ಆದರೆ, ಈಗಾಗ್ತಿರೋದು ಪಾಕ್ ಡೈರೆಕ್ಟರ್ರು, ಇಂಡಿಯಾದ ಹೀರೋಯಿನ್ನು !
ಹೌದು . ಕರೀನಾ ಕಪೂರ್ ಇದಕ್ಕೆ ಮೇಲ್ಪಂಕ್ತಿ ಹಾಕುತ್ತಿದ್ದಾರೆ. ಪಾಕಿಸ್ತಾದ ನಿರ್ದೇಶಕ ಶೊಯೇಬ್ ಮನ್ಸೂರ್‌ನ ಚಿತ್ರದಲ್ಲಿ ಕರೀನಾ ಕಪೂರ್ ನಾಯಕಿ ಆಗಿ ನಟಿಸುತ್ತಿದ್ದಾಳಂತೆ. ಕೆಲ ದಿನಗಳ ಹಿಂದೆ ಕರೀನಾ ಕಪೂರ್ ಗೆ ಮನ್ಸೂರ್ ಇ ಮೇಲ್ ಮಾಡಿದ್ದಾರೆ. ತಮ್ಮ ಸ್ಟೋರಿ ಲೈನನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಆ ಸ್ಟೋರಿ ಕರೀನಾಳಿಗೆ ಇಷ್ಟವಾಗಿದೆಯಂತೆ. ಈ ಸಂಬಂಧ ಮುಂದಿನವಾರ ದುಬೈನಲ್ಲಿ ಮೊದಲ ಭೇಟಿ ಪಡೆಯಲಿದೆಯಂತೆ.
ಕರೀನಾ ಈಗ ಆರ್. ಬಾಲ್ಕಿ ನಿರ್ದೇಶನದ ‘ಕಿ ಆಂಡ್ ಕಾ’ ಸಿನಿಮಾದ ಶೂಟಿಂಗ್‌ನಲ್ಲಿದ್ದಾಳೆ. ಅರ್ಜುನ್ ಕಪೂರ್ ಜತೆಗಿನ ಈ ಚಿತ್ರದ ಶೂಟಿಂಗ್ ಕೆಲವೇ ದಿನಗಳಲ್ಲಿ ಮುಗಿಯಲಿದೆಯಂತೆ. ಅಂದುಕೊಂಡಂತೆ ಆದರೆ ಮನ್ಸೂರ್‌ನ ಚಿತ್ರಕ್ಕೆ ಪಾಕಿಸ್ತಾನದ ಕೆಲವೆಡೆ ಕರೀನಾ ಶೂಟಿಂಗಿಗೆ ತೆರಳಬೇಕು. ಆದರೆ, ಕರೀನಾ ಅಧಿಕೃತವಾಗಿ ಪಾಕ್ ಸಿನಿಮಾದ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಈ ಡೈರೆಕ್ಟರ್ ಮಾಡಿರುವುದೇ ಎರಡು ಸಿನಿಮಾ. ೨೦೦೭ರಲ್ಲಿ, ಇನ್ನೊಂದು ೨೦೧೧ರಲ್ಲಿ. ಈಗ ನಾಲ್ಕು ವರುಷ ಬಿಟ್ಟು ಮತ್ತೆ ಸಿನಿಮಾ ಕೈಗೆತ್ತಿಕೊಂಡಿದ್ದಾನೆ. ಈತ ಸಿನಿಮಾ ಮಾಡಿದ್ದಕ್ಕಿಂತ ಟಿವಿ ಶೋಗಳನ್ನು ನಡೆಸಿದ್ದೇ ಹೆಚ್ಚು ಎನ್ನುತ್ತಿದ್ದಾರೆ ಎಲ್ಲರೂ.
ಕೆಲವು ತಿಂಗಳ ಹಿಂದೆ ಬಂದ, ಕರೀನಾ ಕಪೂರ್ ಗಂಡ ಸೈ- ಅಲಿಖಾನ್ ನಟಿಸಿದ ‘ಫ್ಯಾಂಟಮ್’ ಅನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿತ್ತು. ಈ ಚಿತ್ರದ ವಿರುದ್ಧ ಅಲ್ಲಿನ ಪ್ರತಿಭಟನೆಗಳೂ ನಡೆದಿದ್ದವು. ಆದರೆ, ಈಗಿನ ಕರೀನಾ ನಿರ್ಧಾರ ಈಕೆಯ ಧೈರ್ಯವನ್ನು ಎತ್ತಿಹಿಡಿದಂತಿದೆ.
Advertisement