ಪೋಲೋ ಪ್ಲೇಯರ್ ಜತೆ ಫ್ರೀಡಾ ಇನ್ನಿಂಗ್ಸ್

ಫ್ರೀಡಾ ಪಿಂಟೋ ಬರ್ತ್‍ಡೇ ಅಂದ್ರೆ ಅಲ್ಲೇನಾದ್ರೂ ಹಸಿಬಿಸಿ ದೃಶ್ಯ ಇರುತ್ತೆ. `ಸ್ಲಂ ಡಾಗ್ ಮಿಲಿಯನೇರ್' ಖ್ಯಾತಿಯ...
ಫ್ರೀಡಾ ಪಿಂಟೋ
ಫ್ರೀಡಾ ಪಿಂಟೋ
ಫ್ರೀಡಾ ಪಿಂಟೋ ಬರ್ತ್‍ಡೇ ಅಂದ್ರೆ ಅಲ್ಲೇನಾದ್ರೂ ಹಸಿಬಿಸಿ ದೃಶ್ಯ ಇರುತ್ತೆ. `ಸ್ಲಂ ಡಾಗ್ ಮಿಲಿಯನೇರ್' ಖ್ಯಾತಿಯ ಈ ನಟಿ ಆರು ವರುಷ ದೇವ್ ಪಟೇಲ್ ಜೊತೆ ಬಿಂದಾಸ್ ಆಗಿ ತಿರುಗಾಡಿದ್ದಾಯಿತು. 
ಅವನಿಂದ ಬ್ರೇಕ್‍ಅಪ್ ಆದ್ಮೇಲೆ ಕಳೆದ ವರುಷದ ಬರ್ತ್‍ಡೇಗೆ ದಿಢೀರ್ ಬಾಯ್ಫ್ರೆಂಡ್ ಆಗಿ ಸಿದ್ಧಾರ್ಥ ಮಲ್ಯನೂ ಪಕ್ಕದಲ್ಲಿ ಹಾಜರಾಗಿಬಿಟ್ಟ. ಆತನಿಂದಲೂ ದೂರ ಆದಳೇನೋ, ಈಗ 31ನೇ ಬರ್ತ್‍ಡೇಗೆ ಹೊಸಾ ಬಾಯ್ಫ್ರೆಂಡಿಗೆ ಪಬ್ಲಿಕ್ಕಿನಲ್ಲೇ ಮುತ್ತಿಕ್ಕಿ ಸುದ್ದಿ ಆಗಿದ್ದಾಳೆ! 
ಹೌದು, ಕ್ಯಾಲಿಫೋರ್ನಿಯಾದ ಬೆವೆರ್ಲಿ ಹಿಲ್ಸ್ ಹೋಟೆಲ್ಲಿನಲ್ಲಿ ಫ್ರೀಡಾ ಮುತ್ತಿಕ್ಕಿದ್ದು ರೊನಿ ಬಕಾರ್ಡಿಯೆಂಬ ಪೋಲೋ ಪ್ಲೇಯರ್‍ ಗೆ! ಈ ಹೋಟೆಲ್ಲಿನಲ್ಲಿ ಸ್ಪೆಷೆಲ್ ಐಸ್‍ಕ್ರೀಮ್ ಅನ್ನು ಖರೀದಿಸಲು ಇಬ್ಬರೂ ಸಾಲಿನಲ್ಲಿ ನಿಂತಿದ್ದಾರೆ. ಈ ವೇಳೆ ಮುತ್ತಿಕ್ಕಿ ಸುತ್ತಮುತ್ತಲಿದ್ದವರ ಹುಬ್ಬೇರಿಸಿದ್ದಾರೆ. ಕಳೆದ ವರುಷವೂ ಫ್ರೀಡಾ ಇಂಥದ್ದೇ ಕಾಂಟ್ರವರ್ಸಿ ಮಾಡ್ಕೊಂಡಿದ್ದಳು.
ಲಾಸ್ ಏಂಜಲೀಸ್‍ನಲ್ಲಿ ಅರೆಬೆತ್ತಲೆ ಪಾರ್ಟಿ ನಡೆಯುವ ಕ್ಲಬ್ಬಿನಲ್ಲಿ ಫ್ರೀಡಾ ಪಿಂಟೋ ತನ್ನ 30ನೇ ವರುಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಆಗ ಸಿದ್ಧಾರ್ಥ ಮಲ್ಯ ಕಂಪನಿ ಕೊಟ್ಟಿದ್ದ. ಇವರಿಬ್ಬರೂ ಕ್ಲಬ್‍ನ ಹೊರಗಡೆ ಕೈಯಲ್ಲಿ ಶಾಂಪೇನ್ ಬಾಟಲ್ ಹಿಡಿದು, ಪೋಲ್ ಡ್ಯಾನ್ಸ್ ಮಾಡಿದ ಕೆಲವು ಹಸಿಬಿಸಿ ದೃಶ್ಯಗಳು ಇಂಟರ್ನೆಟ್ಟಿನಲ್ಲಿ ವೈರಲ್ ಆಗಿದ್ದವು. 
ಕೈಯಲ್ಲಿ ಮೂರು ಹಾಲಿವುಡ್ ಸಿನಿಮಾ, ಒಂದು ಟಿವಿ ಶೋ ಇಟ್ಟುಕೊಂಡಿರುವ ಫ್ರೀಡಾ ಅಮೆರಿಕದಲ್ಲೀಗ ಫುಲ್ ಬ್ಯುಸಿ. ಪುರುಸೊತ್ತಿದ್ದಾಗ ಈ ಥರನೂ ಸುದ್ದಿ ಹಬ್ಬಿಸುತ್ತಾಳೆ. ಭಲೇ ಫ್ರೀಡಾ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com