ಜೂಲಿಗೆ ಈಗ 7 ಮಕ್ಕಳು!

ಸಿರಿಯಾದ ನಿರಾಶ್ರಿತರ ಕೂಗು ಹಾಲಿವುಡ್ಡನ್ನು ತಲುಪಿದೆ. ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ ಏಂಜಲಿನಾ ಜೂಲಿ...
ಏಂಜಲಿನಾ ಜೂಲಿ
ಏಂಜಲಿನಾ ಜೂಲಿ
ಸಿರಿಯಾದ ನಿರಾಶ್ರಿತರ ಕೂಗು ಹಾಲಿವುಡ್ಡನ್ನು ತಲುಪಿದೆ. ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ ಏಂಜಲಿನಾ ಜೂಲಿ ಮತ್ತು ಬ್ರಾಡ್ ಪಿಟ್ ಮತ್ತೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಈ ಮೂಲಕ ಜೂಲಿಗೆ 7 ಮಕ್ಕಳು ಆದಂತಾಗಿದೆ! ಜೂಲಿಯ ಕುಟುಂಬ ಅನ್ನೋದೇ ಪುಟ್ಟ ವಿಶ್ವ. ಯಾಕೆ ಗೊತ್ತಾ? ಈ ಹಿಂದೆ ಕಾಂಬೋಡಿಯಾ, ವಿಯೇಟ್ನಾಂ, ಇಥಿಯೋಫಿಯಾದ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಳು. ಈಗ ಸಿರಿಯಾದ ಮಗು. ಇನ್ನು ಮೂರು ಮಕ್ಕಳಿಗೆ ಜೂಲಿಯೇ ಜನ್ಮ ಕೊಟ್ಟಿದ್ದಳು. 
ಜೂಲಿ ದತ್ತು ತೆಗೆದುಕೊಂಡ ಮಗುವಿನ ಅಮ್ಮ, ಅಣ್ಣಂದಿರು ಯುದ್ಧದಲ್ಲಿ ಮಡಿದಿದ್ದಾರೆ. ಅಪ್ಪನನ್ನು ಸಿರಿಯಾ ಸೈನಿಕರು ಎಳೆದೊಯ್ದಿದ್ದಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com