ಚೀನಾ ಬೆಡಗಿ ಜತೆ ಸಲ್ಲು ರೋಮ್ಯಾನ್ಸ್

ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಿರ್ದೇಶಕ ಕಬೀರ್ ಖಾನ್ ಮೂರನೇ ಬಾರಿಗೆ ಜತೆಯಾಗಿದ್ದಾರೆ. ಕಬೀರ್ ಖಾನ್...
ಸಲ್ಮಾನ್ ಖಾನ್
ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಿರ್ದೇಶಕ ಕಬೀರ್ ಖಾನ್ ಮೂರನೇ ಬಾರಿಗೆ ಜತೆಯಾಗಿದ್ದಾರೆ. ಕಬೀರ್ ಖಾನ್ ತಮ್ಮ ಮುಂದಿನ ಚಿತ್ರಕ್ಕೆ ಭಾರತ ಮತ್ತು ಚೀನಾದ ಸಾಮಾಜಿಕ-ಸಾಂಸ್ಕೃತಿಕ ಕಥೆಯನ್ನು ಹೆಣೆದಿದ್ದರಿಂದ ಚೀನಾ ಸುಂದರಿ ಜತೆ ಸಲ್ಮಾನ್ ಡ್ಯೂಯೆಟ್ ಆಡಲಿದ್ದಾರೆ.
ಸಲ್ಮಾನ್ ಖಾನ್ ಜತೆ ಏಕ್ ತಾ ಟೈಗರ್ ಮತ್ತು ಬಜರಂಗಿ ಬಾಯಿಜಾನ್ ಬ್ಲಾಕ್ ಬಸ್ಟರ್ ಚಿತ್ರಗಳನ್ನು ಕಬೀರ್ ಖಾನ್ ನಿರ್ದೇಶಿಸಿದ್ದರು. ಇದೇ ಮೊದಲ ಬಾರಿಗೆ ಚೀನಾ ನಿರ್ಮಾಪಕರ ಜತೆ ಸೇರಿ ಚಿತ್ರ ತಯಾರಿಸಲಾಗುತ್ತಿದ್ದು, ಈ ಚಿತ್ರ ಎರಡು ಭಾಷೆಗಳಲ್ಲಿ ತಯಾರಾಗುತ್ತಿದೆ. 
ಬಜರಂಗಿ ಬಾಯಿಜಾನ್ ಚಿತ್ರದಲ್ಲಿ ಭಾರತದಲ್ಲಿ ಕಳೆದುಹೋದ ಹುಡುಗಿಯೊಬ್ಬಳನ್ನು ಪಾಕಿಸ್ತಾನದಲ್ಲಿರುವ ಪೋಷಕರಿಗೆ ತಲುಪಿಸುವ ಚಿತ್ರಕಥೆಯನ್ನು ಹೊಂದಿತ್ತು. ಇದೀಗ ಭಾರತ ಮತ್ತು ಚೀನಾದ ನಡುವಿನ ಪ್ರಯಾಣವನ್ನೇ ಕಬೀರ್ ಖಾನ್ ತಮ್ಮ ಮುಂದಿನ ಚಿತ್ರದ ಕಥೆಯನ್ನಾಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com