ಶಾರುಖ್ ಖಾನ್ ತಮ್ಮ ಸ್ಟಾರ್ ಸ್ಟೇಟಸ್ ಕಳೆದುಕೊಳ್ಳಬಹುದು: ರಾಮ್ ಗೋಪಾಲ್ ವರ್ಮಾ

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ವಿರುದ್ಧ ವಾಗ್ಧಾಳಿ ನಡೆಸಿದ್ದು,...
ರಾಮ್ ಗೋಪಾಲ್ ವರ್ಮಾ, ಶಾರುಖ್ ಖಾನ್
ರಾಮ್ ಗೋಪಾಲ್ ವರ್ಮಾ, ಶಾರುಖ್ ಖಾನ್
Updated on: 
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ವಿರುದ್ಧ ವಾಗ್ಧಾಳಿ ನಡೆಸಿದ್ದು, ಅವರು ತಮ್ಮ ಸ್ಟಾರ್ ಸ್ಟೇಟಸ್ ಅನ್ನು ಸಲ್ಮಾನ್ ಖಾನ್ ಗೆ ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ,
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಖ್ಯಾತ ತಮಿಳು ನಟ ಕಮಲ್ ಹಾಸನ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ತಮ್ಮ ಸ್ಟಾರ್ ಸ್ಟೇಟಸ್ ಕಳೆದುಕೊಂಡ ಹಾಗೆ ಎಸ್ಆರ್ ಕೆ ಅವರು ತಮ್ಮ ಸ್ಟಾರ್ ಸ್ಟೇಟಸ್ ಅನ್ನು ಕಳೆದುಕೊಳ್ಳಲಿದ್ದಾರೆ ಎಂದಿದ್ದಾರೆ. ಅಲ್ಲದೆ ಶಾರುಖ್ ಖಾನ್ ಅವರ ಚಿತ್ರಗಳ ಆಯ್ಕೆಯನ್ನು ಪ್ರಶ್ನಿಸಿರುವ ನಿರ್ದೇಶಕ, ಕಮಲ್ ಹಾಸನ್ ತಪ್ಪಿನಿಂದ ಎಸ್ಆರ್ ಕೆ ಪಾಠ ಕಲಿಯಲಿ ಎಂದಿದ್ದಾರೆ.
ಇತ್ತೀಚಿಗಷ್ಟೇ ತೆರೆಕಂಡ ಶಾರುಖ್ ಖಾನ್ ಅವರ 'ಫಾನ್' ಗೀಳನ್ನು ಮತ್ತು ಆನಂದ್ ಎಲ್ ರೈ ಅವರ ಮುಂಬರುವ ಚಿತ್ರದಲ್ಲಿ ಒಬ್ಬ ಕುಬ್ಜನ ಪಾತ್ರ ಒಪ್ಪಿಕೊಂಡಿರುವ ಎಸ್ಆರ್ ಕೆ ನಿರ್ಧಾರವನ್ನು ರಾಮ್ ಗೋಪಾಲ್ ವರ್ಮಾ ಅವರು ಟೀಕಿಸಿದ್ದಾರೆ. ಇದೇ ವೇಳೆ ಕಮಲ್ ಅವರ ಅಪ್ಪು ರಾಜಾ ಚಿತ್ರವನ್ನು ಉದಾಹರಣೆಯಾಗಿ ನೀಡಿರುವ ವರ್ಮಾ, ಕುಬ್ಜನಂತಹ ಪಾತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಸೂಪರ್ ಶಾರುಖ್ ಖಾನ್ ಅವರು ಒಬ್ಬ ಸಾಮಾನ್ಯ ಫ್ಯಾನ್ ಆಗುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಕಮಲ್ ಹಾಸನ್ ಅವರು ಕುಬ್ಜ ಪಾತ್ರಗಳನ್ನು ಮಾಡುವುದಕ್ಕಿಂತ ಮುಂಚೆ ರಜನಿಕಾಂತ್ ಅವರಿಗಿಂತ ದೊಡ್ಡ ಸ್ಟಾರ್ ಆಗಿದ್ದರು. ಹೀಗಾಗಿ ನಾನು ಒಬ್ಬ ಅಭಿಮಾನಿಯಾಗಿ ಹೇಳುತ್ತಿದ್ದೇನೆ, ಎಸ್ಆರ್ ಕೆ ತಪ್ಪು ಸಲಹೆ ನೀಡುವವರ ಮಾತು ಕೇಳುವುದಿಲ್ಲ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಮೆಗಾ ರಜನಿಕಾಂತ್ ಆಗುವುದನ್ನು ತಡೆಯುತ್ತಿರುವ ನಿಮ್ಮ ಹತ್ತಿರದ ಹಾಗೂ ಆತ್ಮೀಯರ ಮಾತುಗಳನ್ನು ಕೇಳಬೇಡಿ ಎಂದು ಬಾಲಿವುಡ್ ಸೂಪರ್ ಸ್ಟಾರ್ ಗೆ ರಾಮ್ ಗೋಪಾಲ್ ವರ್ಮಾ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com