ಬಾಯ್ ಫ್ರೆಂಡ್ ಗೆ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಿಸ್, ಫೋಟೋ ವೈರಲ್

ಬಾಲಿವುಡ್ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್ ಈಗ ಭಾರಿ ಸುದ್ದಿಯಲ್ಲಿದ್ದಾರೆ.
ಶಿಖಾರ್ ಪಹಾರಿ - ಜಾಹ್ನವಿ ಕಪೂರ್
ಶಿಖಾರ್ ಪಹಾರಿ - ಜಾಹ್ನವಿ ಕಪೂರ್
ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್ ಈಗ ಭಾರಿ ಸುದ್ದಿಯಲ್ಲಿದ್ದಾರೆ.
ಜಾಹ್ನವಿ ಕಪೂರ್ ತನ್ನ ಬಾಯ್ಫ್ರೆಂಡ್ ಶಿಖಾರ್ ಪಹಾರಿಯಾಗೆ ಕಿಸ್ ಮಾಡಿರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಅತಿ ವೇಗವಾಗಿ ಹರಿದಾಡುತ್ತಿವೆ.
ಸದ್ಯ ನ್ಯೂಯಾರ್ಕ್ ನಲ್ಲಿ ಅಭಿನಯ ತರಬೇತಿ ಪಡೆಯುತ್ತಿರುವ ಜಾಹ್ನವಿಯ ಬಾಯ್ ಫ್ರೆಂಡ್ ಶಿಖಾರ ಎಂಬುದು ಈಗಾಗಲೇ ಅವರ ಫ್ಯಾನ್​ಗಳಿಗೆಲ್ಲಾ ತಿಳಿದಿದೆ. 
ಬಾಲಿವುಡ್ ಪ್ರವೇಶಕ್ಕೆ ಮುನ್ನವೇ ಜಾಹ್ನವಿ ಈ ರೀತಿಯ ಚಿತ್ರಗಳನ್ನು ಬಹಿರಂಗಗೊಳಿಸಿ ತನ್ನ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಚಿತ್ರ ಎಲ್ಲಿಂದ ಜಾಲತಾಣಕ್ಕೆ ಬಂತೆಂಬುದು ನಿಖರವಾಗಿ ತಿಳಿದಿಲ್ಲ, ಆದರೂ ಫೋಟೋಗಳು ಮಾತ್ರ ವೈರಲ್ ಆಗುತ್ತಿವೆ,
ಈಗಾಗಲೇ ಖ್ಯಾತ ಸೆಲೆಬ್ರಿಟಿಗಳ ಮಕ್ಕಳಾದ ಆರ್ಯನ್​ಖಾನ್, ನವ್ಯಾ ನವೇಲಿ ನಂದಾ, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿಖಾನ್ ಮತ್ತಿತರರು ವಿವಿಧ ವಿಚಾರಗಳಿಂದಾಗಿ ಜಾಲತಾಣಗಳಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ. ಈಗ ಅದು ಶ್ರೀದೇವಿ ಪ್ರಥಮ ಪುತ್ರಿ ಸರದಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com