ಮೋದಿ ಭಾವಚಿತ್ರವಿರುವ ಡ್ರೆಸ್ ಧರಿಸಿ ಹೊಸ ವಿವಾದ ಸೃಷ್ಟಿಸಿದ ರಾಖಿ

ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಉಡುಪಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ...
ರಾಖಿ ಸಾವಂತ್
ರಾಖಿ ಸಾವಂತ್

ಮುಂಬೈ: ಸದಾ ವಿವಾದದಿಂದಲೇ ಸುದ್ದಿಯಾಗುವ ಬಾಲಿವುಡ್ ತಾರೆ ರಾಖಿ ಸಾವಂತ್ ಈಗ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಉಡುಪಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ತಮ್ಮದೇ ಇನ್​ಸ್ಟಾಗ್ರಾಂ ಖಾತೆಯಲ್ಲಿ ಇಂತದ್ದೊಂದು ಉಡುಪು ಧರಿಸಿಕೊಂಡು ಫೋಟೊ ಅಪ್​ಲೋಡ್ ಮಾಡಿಕೊಂಡಿರುವ ರಾಖಿ ಸಾವಂತ್, ಇಂಡಿಯನ್ ಅಮೆರಿಕನ್ ಫೆಡರೇಷನ್ ಹಮ್ಮಿಕೊಂಡಿದ್ದ 70ನೇ ಸ್ವಾತಂತ್ರ್ಯೊತ್ಸವ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಈ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಕಾರ್ಯಕ್ರಮ ವೀಟನ್​ನ ಡುಪೇಜ್ ಕೌಂಟಿ ಫೇರ್​ಗ್ರೌಂಡ್ಸ್​ನಲ್ಲಿ ಆಗಸ್ಟ್ 7ರಂದು ನಡೆದಿದೆ.

ಮೋದಿ ಭಾವಚಿತ್ರವಿರುವ ಕಪ್ಪು ಬಣ್ಣದ ಉಡುಪು ಧರಿಸಿದ್ದ ರಾಖಿ ಸಾವಂತ್ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇವೆಲ್ಲವು ರಾಖಿಯ ಪ್ರಚಾರದ ಗಿಮಿಕ್ ಎನ್ನುತ್ತಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ರೂಪದರ್ಶಿ ಕಂದೀಲ್ ಬಲೋಚ್ ಹತ್ಯೆಯಾದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ರಾಖಿ ಸಾವಂತ್, ಹೆಣ್ಣು ಮಕ್ಕಳಿಗೆ ಹೇಗೆ ರಕ್ಷಣೆ ನೀಡಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಕಲಿಯಿರಿ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಸಲಹೆ ನೀಡಿ ಮೋದಿ ಬಗ್ಗೆ ಅಭಿಮಾನ ಮೆರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com