
ಮುಂಬೈ: ಬಾಲಿವುಡ್ ನಟಿ ಪ್ರೀತಿ ಝಿಂಟಾ ತನ್ನ ಬಾಯ್ ಫ್ರೆಂಡ್ ಜೀನ್ ಗುಡ್‌ಇನಫ್ ನನ್ನು ಇದೇ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಅಮೆರಿಕದಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಮಾರ್ಚ್ ಅಥವಾ ಎಪ್ರಿಲ್‌ನಲ್ಲಿ ಪ್ರೀತಿ ಝಿಂಟಾರ ಮದುವೆ ನಡೆಯಲಿದ್ದು ಅದೊಂದು ಆತ್ಮೀಯ ಸಮಾರಂಭವಾಗಲಿದೆ. ಮದುವೆ ದಿನಾಂಕವನ್ನು ಈಗಿನ್ನೂ ನಿಗದಿಪಡಿಸಿಲ್ಲ ಎಂದು ಝಿಂಟಾ ನಿಕಟ ಮೂಲಗಳಿಂದ ತಿಳಿದುಬಂದಿದೆ.
ಪ್ರೀತಿ ಮತ್ತು ಜೀನ್ ಇಬ್ಬರು ಖಾಸಗಿ ವ್ಯಕ್ತಿಗಳಾಗಿರುವುದರಿಂದ ಅವರ ಮದುವೆಯು ತೀರ ಖಾಸಗಿ ಸಮಾರಂಭವಾಗಲಿದ್ದು, ಕೆಲವೇ ಕೆಲವು ಮಂದಿ ಮಾತ್ರವೇ ಆ ಖಾಸಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರೀತಿಯ ಅಭಿರುಚಿ ಮತ್ತು ಆಯ್ಕೆಗೆ ತಕ್ಕಂತೆ ಮದುವೆ ಮಂಟಪವನ್ನು ಸಿಂಗರಿಸಲಾಗುವುದು' ಎಂದು ಮೂಲಗಳು ಹೇಳಿವೆ.
ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ಮದುವೆ ನಡೆದ ಬಳಿಕ ಮುಂಬೈ ರಜಪೂತ ಸಂಪ್ರದಾಯದ ಪ್ರಕಾರ ವಿವಾಹ ಸಮಾರಂಭ ನಡೆಯಲಿದೆ. ಬಾಲಿವುಡ್‌ನ ದೊಡ್ಡ ದೊಡ್ಡ ನಟರೊಂದಿಗೆ ಪ್ರೀತಿ ನಟಿಸಿರುವುದರಿಂದ ಮತ್ತು ಅಲ್ಲಿನ ಅನೇಕರೊಂದಿಗೆ ಉತ್ತಮ ಬಾಂಧವ್ಯವನ್ನು ಆಕೆ ಈಗಲೂ ಹೊಂದಿರುವುದರಿಂದ ಮುಂಬೈ ಸಮಾರಂಭ ಜೋರಾಗಿ ನಡೆಯಲಿದೆ ಎಂದು ತಿಳಿದುಬಂದಿದೆ.
Advertisement