ಸನ್ನಿ ಲಿಯೋನ್ ಕ್ಯಾಪಿ ಕಾಟ್: ಸನ್ನಿ ಕಾಲೆಳೆದ ರಾಖಿ

ಕಾಂಟ್ರಿವರ್ಸಿ ಕ್ವೀನ್ ಎಂದು ಹೆಸರಾದ, ಹಾಟ್ ಬೆಡಗಿ ರಾಖಿ ಸಾವಂತ್ ಮರಳಿ ಬಂದಿದ್ದಾರೆ. ಹೊಸ ವರ್ಷದ ಹುಮ್ಮಸ್ಸಿಗೆ ಕಿಚ್ಚು ಹಚ್ಚುವುದಕ್ಕೆ ಭಲ್ಲೇ ಭಲ್ಲೇ ದಲೇರ್...
ರಾಖಿ ಸಾವಂತ್
ರಾಖಿ ಸಾವಂತ್

ಕಾಂಟ್ರಿವರ್ಸಿ ಕ್ವೀನ್ ಎಂದು ಹೆಸರಾದ, ಹಾಟ್ ಬೆಡಗಿ ರಾಖಿ ಸಾವಂತ್ ಮರಳಿ ಬಂದಿದ್ದಾರೆ. ಹೊಸ ವರ್ಷದ ಹುಮ್ಮಸ್ಸಿಗೆ ಕಿಚ್ಚು ಹಚ್ಚುವುದಕ್ಕೆ ಭಲ್ಲೇ ಭಲ್ಲೇ ದಲೇರ್ ಮೆಹಂದಿ ಜೊತೆಗೆ ಹೆಜ್ಜೆ ಹಾಕುತ್ತಾ ಮತ್ತೆ ಲೈಮ್ ಲೈಟ್‍ಗೆ ಮರಳಿದ್ದಾರೆ.

`ಪಾರ್ಟಿ ಪಂಜಾಬಿ ಸ್ಟೈಲ್' ಹೆಸರಿನ ವಿಡಿಯೋದಲ್ಲಿ ನರ್ತಿಸಿದ್ದು ಇಡೀ ವರ್ಷ ಆವರಿಸಿಕೊಳ್ಳುವ ಸೂಚನೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಭಾರತಕ್ಕೆ ಆವರಿಸಿರುವ ಲಿಯೋನ್‍ಳ ಸನ್ನಿಯ ಬಗ್ಗೆ ಖಾರವಾಗಿ ಮಾತನಾಡಿದ್ದು, ಸನ್ನಿಲಿಯೋನ್ ಸೂಪರ್ ಗರ್ಲ್ ಸ್ಟೈಲ್ ಅನ್ನು ಕಾಪಿ ಕ್ಯಾಟ್  ಎಂದು ಕಾಲೆಳೆದಿದ್ದಾರೆ.

ಸನ್ನಿ ಬಾಲಿವುಡ್‍ನಲ್ಲೇ ಉಳಿದಿರುವ ಆಸೆ ಇದ್ದರೆ, ನನ್ನನ್ನು ಕಾಪಿ ಮಾಡಬೇಕು ಎಂದೂ ಫರ್ಮಾನು  ಹೊರಡಿಸಿದ್ದಾರೆ. ಈ ನಡುವೆ ಇತ್ತೀಚೆಗೆ ಭಾರಿ ಸುದ್ದಿ ಮಾಡಿದ ಇಂದ್ರಾಣಿ ಮುಖರ್ಜಿ ಪಾತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿರುವ ಸುದ್ದಿಯೂ ಬಂದಿದೆ. `ಏಕ್ ಕಹಾನಿ ಜೂಲಿ ಕಿ' ಹೆಸರಿನ ಚಿತ್ರದಲ್ಲಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com