ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ 'ಸಿಟಿಆರ್'ನಲ್ಲಿ ಬೆಣ್ಣೆ ದೋಸೆ, ಕಾಫಿ ಸವಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ!

ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಉಪಹಾರಕ್ಕೆ ಅತ್ಯಂತ ಪ್ರಸಿದ್ಧವಾದ 'ಸೆಂಟ್ರಲ್ ಟಿಫಿನ್ ರೂಮ್' (CTR) ಗೆ ಭೇಟಿ ನೀಡಿದರು. ಈ ಉಪಹಾರ ಗೃಹವು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೀಪಿಕಾ ಅವರ ಭೇಟಿಯ ಚಿತ್ರವೊಂದನ್ನು ಹಂಚಿಕೊಂಡಿದೆ.
Deepika Padukone
ನಟಿ ದೀಪಿಕಾ ಪಡುಕೋಣೆ
Updated on: 

ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಉಪಹಾರಕ್ಕೆ ಅತ್ಯಂತ ಪ್ರಸಿದ್ಧವಾದ 'ಸೆಂಟ್ರಲ್ ಟಿಫಿನ್ ರೂಮ್' (CTR) ಗೆ ಭೇಟಿ ನೀಡಿದರು. ಈ ಉಪಹಾರ ಗೃಹವು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೀಪಿಕಾ ಅವರ ಭೇಟಿಯ ಚಿತ್ರವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ನಟಿ, ಸಿಟಿಆರ್ ಸಿಬ್ಬಂದಿಯ ಇಬ್ಬರು ಸದಸ್ಯರೊಂದಿಗೆ ಸೆಲ್ಫಿಗಾಗಿ ಪೋಸ್ ನೀಡುವುದನ್ನು ಕಾಣಬಹುದು.

ಈ ಭೇಟಿಯು ದೀಪಿಕಾ ಅವರಿಗೂ ಬೆಂಗಳೂರಿಗೂ ಇರುವ ನಂಟನ್ನು ಮತ್ತೆ ಮುನ್ನೆಲೆಗೆ ತಂದಿದೆ. ಏಕೆಂದರೆ ಅವರು ಬೆಳೆದಿದ್ದು ಇದೇ ನಗರದಲ್ಲಿ. ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದ್ದರೂ, ದೀಪಿಕಾ ತಮ್ಮ ಬಾಲ್ಯ ಮತ್ತು ಶಾಲಾ ದಿನಗಳ ಬಹುಪಾಲು ಸಮಯವನ್ನು ಬೆಂಗಳೂರಿನಲ್ಲೇ ಕಳೆದಿದ್ದಾರೆ. ಈ ನಗರದ ಮೇಲಿರುವ ತಮ್ಮ ಪ್ರೀತಿ ಮತ್ತು ಇಲ್ಲಿನ ನೆನಪುಗಳ ಬಗ್ಗೆ ಅವರು ಹಲವು ಬಾರಿ ಮಾತನಾಡಿದ್ದಾರೆ. ದೀಪಿಕಾ ಅವರ ಈ ಭೇಟಿಯು ನಗರದ ಹಳೆಯ ಬಡಾವಣೆಗಳು ಮತ್ತು ಇಲ್ಲಿನ ಆಹಾರ ಸಂಸ್ಕೃತಿಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.

Deepika Padukone
17 ದಿನಕ್ಕೆ ಬರೋಬ್ಬರಿ ₹1,600 ಕೋಟಿ ಗಳಿಕೆ: ಗಲ್ಲಾಪೆಟ್ಟಿಗೆಯಲ್ಲಿ ಓಟ ಮುಂದುವರಿಸಿದ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ!

ಮಲ್ಲೇಶ್ವರಂನಲ್ಲಿರುವ 'ಸೆಂಟ್ರಲ್ ಟಿಫಿನ್ ರೂಮ್', 1952 ರಿಂದಲೂ ಬೆಂಗಳೂರಿಗರಿಗೆ ಸೇವೆ ಸಲ್ಲಿಸುತ್ತಾ ಬಂದಿದೆ. ದಶಕಗಳಿಂದಲೂ, ಇಲ್ಲಿನ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಉಪಹಾರಗಳು, ಅದರಲ್ಲೂ ವಿಶೇಷವಾಗಿ 'ಬೆಣ್ಣೆ ದೋಸೆ' (benne dosa), ಗ್ರಾಹಕರ ಮನಗೆದ್ದಿವೆ. ಸಾಂಪ್ರದಾಯಿಕ ಮಾರುಕಟ್ಟೆಗಳು, ದೇವಾಲಯಗಳು ಮತ್ತು ತಿಂಡಿ ತಿನಿಸುಗಳ ತಾಣವಾಗಿರುವ ಮಲ್ಲೇಶ್ವರಂ, ಬೆಂಗಳೂರಿನ ಅತ್ಯಂತ ಪರಿಚಿತ ವಸತಿ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಹೂವಿನ ಮಾರುಕಟ್ಟೆ ಮತ್ತು ಹಳೆಯ ಶೈಲಿಯ ಉಪಹಾರ ಗೃಹಗಳು ಈ ಬಡಾವಣೆಯ ಗುರುತಿನ ಅವಿಭಾಜ್ಯ ಅಂಗಗಳಾಗಿ ಉಳಿದುಕೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X