ರಣಬೀರ್ ಕಪೂರ್‍ಗೆ ಯಾಕೋ ಟೈಮೇ ಚೆನ್ನಾಗಿಲ್ಲ ಅನ್ಸುತ್ತೆ. ಕೈಕೈ ಹಿಡಿದು ಓಡಾಡಿದ, ಕಿಸ್ ಕೊಟ್ಟು ಮುದ್ದಾಡಿದ ಸಂಗಾತಿಗಳೆಲ್ಲ ಕೈ ಕೊಟ್ಟು ಹೋಗ್ತಿದ್ದಾರೆ.
ಮೊದಲು ಅವಂತಿಕಾ ಮಲ್ಲಿಕ್, ನಂತರ ಸೋನಂ ಕಪೂರ್, ನಂದಿತಾ ಮಹ್ತಾನಿ, ದೀಪಿಕಾ ಪಡುಕೋಣೆ, ನರ್ಗೀಸ್ ಫಖ್ರಿ... ಇವರೆಲ್ಲ ಆದ್ಮೇಲೆ ಗರ್ಲ್ ಫ್ರೆಂಡ್ ಆಗಿ ಬಂದು ಮುದ್ದಿಸಿದವಳು ಕತ್ರಿನಾ ಕೈಫ್. ಆದರೆ, ಈಗ ಕತ್ರಿನಾ ಕೂಡ ಕೈಕೊಟ್ಟಿದ್ದಾಳಂತೆ!
ಇವರಿಬ್ಬರ ಸಂಬಂಧದಲ್ಲಿ ಹೇಗೆ ಬಿರುಕು ಮೂಡಿತು ಅನ್ನೋದು ಇನ್ನೂ ಬಹಿರಂಗ ಆಗಿಲ್ಲ. ಎರಡೂ ಫ್ಯಾಮಿಲಿಯವರು ಒಟ್ಟಿಗೆ ಕ್ರಿಸ್‍ಮಸ್ ಆಚರಿಸಿದ್ದು ಮೊನ್ನೆ ಮೊನ್ನೆ. ಹೊಸ ವರ್ಷದ ಕೇಕನ್ನು ಕಟ್ ಮಾಡಿ ರಣಬೀರ್, ಕತ್ರಿನಾಗೆ ತಿನ್ನಿಸಿದ್ದು ಇದೇ 2016ರಲ್ಲೇ. ಇವೆಲ್ಲ ಆಗಿ ಇನ್ನೂ ಹದಿನೈದು ದಿನಗಳಾಗಿಲ್ಲ. ಅಷ್ಟರಲ್ಲೇ ಇವರಿಬ್ಬರು ಬೇರ್ಪಟ್ಟಿದ್ದಾರೆ ಅನ್ನೋ ಸುದ್ದಿ ನಿನ್ನೆ ಜೋರಾಗಿದೆ.
ಆದರೆ, ಈ ಬಗ್ಗೆ ಅಧಿಕೃತವಾಗಿ ಇಬ್ಬರೂ ಹೇಳಿಕೊಳ್ತಿಲ್ಲ. ರಣಬೀರ್ ವರ್ತನೆ ಕತ್ರಿನಾ ಕೈಫ್ ಗೆ ಹಿಡಿಸುತ್ತಿಲ್ಲ ಅನ್ನೋದೇ ಇಲ್ಲಿನ ಮುಖ್ಯ ಕಾರಣವಂತೆ. ಈ ಕುರಿತು ಬ್ರೇಕ್ ಅಪ್‍ಗೂ ಮುನ್ನ ಕತ್ರಿನಾ, ಗೆಳೆಯ ಸಲ್ಮಾನ್‍ಖಾನ್ ಜೊತೆ ಒಂದು ತಾಸು ಮಾತಾಡಿದ್ದಾಳಂತೆ.
ಆ ನಂತರವೇ ಬ್ರೇಕ್‍ಅಪ್ ನಿರ್ಧಾರ ಕೈಗೊಂಡಿದ್ದಾಳೆ ಅಂತ `ಝೀ ನ್ಯೂಸ್' ವರದಿ ಮಾಡಿದೆ. ಹಾಗಾದರೆ, ಕತ್ರಿನಾ- ಸಲ್ಮಾನ್ ಮತ್ತೆ ಒಂದಾಗ್ತಿದ್ದಾರಾ? ಗೊತ್ತಿಲ್ಲ!