9 ದಿನದಲ್ಲಿ 100 ಕೋಟಿ ಬಾಚಿದ ಏರ್ ಲಿಫ್ಟ್

ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಅಕ್ಷಯ್‌ ಕುಮಾರ್‌ ಅಭಿನಯದ 'ಏರ್‌ಲಿಫ್ಟ್‌' ಚಿತ್ರ 9 ದಿನದಲ್ಲಿ 100 ಕೋಟಿ ರು. ಗಳಿಸಿದೆ....
ಏರ್ ಲಿಫ್ಟ್ ಚಿತ್ರದ ಪೋಸ್ಟರ್
ಏರ್ ಲಿಫ್ಟ್ ಚಿತ್ರದ ಪೋಸ್ಟರ್

ನವದೆಹಲಿ: ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಅಕ್ಷಯ್‌ ಕುಮಾರ್‌ ಅಭಿನಯದ 'ಏರ್‌ಲಿಫ್ಟ್‌' ಚಿತ್ರ 9 ದಿನದಲ್ಲಿ 100 ಕೋಟಿ ರು. ಗಳಿಸಿದೆ.

ಸತ್ಯ ಘಟನೆಯನ್ನು ಆಧರಿಸಿ ತೆರೆಯ ಮೇಲೆ ಬಂದ ಚಿತ್ರವಾದ ಏರ್ ಲಿಫ್ಟ್ ಪ್ರೇಕ್ಷಕನ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ 9 ದಿನದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು. ಈಗ ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ ಕಮಾಲ್‌ ಮಾಡಿ 102 ಕೋಟಿ ಗಳಿಸುವ ಮೂಲಕ 100 ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ.

ಈ ಮೂಲಕ 100 ಕೋಟಿ ಕ್ಲಬ್‌ಗೆ ಸೇರ್ಪಡೆಯಾದ ವರ್ಷದ ಮೊದಲ ಬಾಲಿವುಡ್‌ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಚಿತ್ರಕ್ಕೆ ರಾಜಾ ಮೆನನ್‌ ನಿರ್ದೇಶನವಿದ್ದು ಅಕ್ಷಯ್‌ ಜೊತೆಯಾಗಿ ನಿಮ್ರತ್‌ ಕೌರ್‌ ಕಾಣಿಸಿಕೊಂಡಿದ್ದಾರೆ.  ಜನವರಿ 22 ರಂದು ಏರ್ ಲಿಫ್ಟ್ ಚಿತ್ರ ವಿಶ್ವದಾದ್ಯಂತ ತೆರೆ ಕಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com