
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಸುಲ್ತಾನ್" ಈ ಹಿಂದಿನ ಎಲ್ಲ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳಿಪಟ ಮಾಡಿದ್ದು, ತೆರೆಕಂಡ ಮೊದಲ ದಿನವೇ ಸುಮಾರು 40 ಕೋಟಿ ಹಣ ಬಾಚಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅನುಷ್ಕಾ ಶರ್ಮಾ ಅಭಿನಯದ, ಅಲಿ ಅಬ್ಬಾಸ್ ಝಾಫರ್ ನಿರ್ದೇಶನದ ಸುಲ್ತಾನ್ ಚಿತ್ರ ಬಾಲಿವುಡ್ ಈ ಹಿಂದಿನ ಬಾಕ್ ಆಫೀಸ್ ದಾಖಲೆಗಳನ್ನು ಮುರಿದಿದ್ದು, ತಜ್ಞರು ಲೆಕ್ಕಾಚಾರ ಹಾಕಿದಂತೆ ತೆರೆಕಂಡ ಮೊದಲ ದಿನವೇ ಸುಮಾರು 40 ಕೋಟಿ ಹಣ ಬಾಚಿದೆಯಂತೆ. ಸುಲ್ತಾನ್ ಚಿತ್ರ ದೇಶಾದ್ಯಂತ ನಿನ್ನೆ ಏಕಕಾಲದಲ್ಲಿ ತೆರೆಕಂಡಿದ್ದು, ಸುಮಾರು 4000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಚಿತ್ರ ಪದರ್ಶನ ಕಂಡಿತ್ತು.
ಬಾಲಿವುಡ್ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಭಾರತದಲ್ಲಿ 4000 ಸ್ಕ್ರೀನ್ ಗಳು ವಿದೇಶದಲ್ಲಿ 1100 ಸ್ಕ್ರೀನ್ ಗಳಲ್ಲಿ ತೆರೆ ಕಂಡಿರುವ ಸುಲ್ತಾನ್ ಅತೀ ದೊಡ್ಡ ಓಪನಿಂಗ್ ಕಂಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳದಿದ್ದರೂ, ಬಾಲಿವುಡ್ ತಜ್ಞರು ಮಾತ್ರ ಸುಲ್ತಾನ್ ಚಿತ್ರದ ಓಪನಿಂಗ್ ಈ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿದೆ ಎಂದು ಹೇಳಿದ್ದಾರೆ.
Advertisement