ಉಡ್ತಾ ಪಂಜಾಬ್ ಲೀಕ್: ಸೆನ್ಸಾರ್ ಮಂಡಳಿಗೆ ನಾಚಿಕೆಯಾಗಬೇಕು; ಅಮೀರ್ ಖಾನ್ ಕಿಡಿ

ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣಗೊಂಡಿದ್ದ ಪ್ರತಿಯಾಗಿದ್ದರೆ ಮಂಡಳಿಗೆ ನಾಚಿಕೆಯಾಗಬೇಕು ಎಂದು ಬಾಲಿವುಡ್ ನಟ ಅಮೀರ್ ಖಾನ್ ..
ಅಮೀರ್ ಖಾನ್
ಅಮೀರ್ ಖಾನ್

ನವದೆಹಲಿ: ಭಾರೀ ವಿವಾದ ಸೃಷ್ಟಿಸಿರುವ ಉಡ್ತಾ ಪಂಜಾಬ್ ಸಿನಿಮಾ ಬಿಡುಗಡೆಗೂ ಮುನ್ನವೇ ಕೆಲವು ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ. ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾಗಿರುವ ಸಿನಿಮಾ ಪ್ರತಿ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣಗೊಂಡಿದ್ದೆ ಎಂಬ ಬಗ್ಗೆ ನನಗೆ ಖಚಿತವಾಗಿ ಗೊತ್ತಿಲ್ಲ. ಅದೇನಾದರೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣಗೊಂಡಿದ್ದ ಪ್ರತಿಯಾಗಿದ್ದರೆ ಮಂಡಳಿಗೆ ನಾಚಿಕೆಯಾಗಬೇಕು ಎಂದು ಬಾಲಿವುಡ್ ನಟ ಅಮೀರ್ ಖಾನ್ ಕಿಡಿಕಾರಿದ್ದಾರೆ.

ನಾನು ಸಿನಿಮಾ ನೋಡಲು ಕಾಯುತ್ತಿದ್ದೇನೆ. ಸಿನಿಮಾ ಸೆನ್ಸಾರ್‌ಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಅಮೀರ್‌ಖಾನ್ ಹೇಳಿದ್ದಾರೆ. ಉಡ್ತಾ ಪಂಜಾಬ್ ಚಿತ್ರತಂಡವನ್ನು ಬೆಂಬಲಿಸಿರುವ ಅಮೀರ್ ಖಾನ್, ಅಭಿಮಾನಿಗಳು ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಬೇಕು ಎಂದು ಈ ಹಿಂದೆ  ಟ್ವೀಟ್ ಮಾಡಿದ್ದಾರೆ.

ದಶಕಗಳಿಂದಲೂ ಫೈರಸಿ ಒಂದು ಪೆಡಂಭೂತವಾಗಿ ಸಿನಿಮಾ ಇಂಡಸ್ಟ್ರಿಯನ್ನು ಕಾಡುತ್ತಿದೆ. ಫೈರಸಿ ಎಂಬುದು ಕಳ್ಳತನ ಎಂದು  ಪ್ರೇಕ್ಷಕ ಯಾಕೆ ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com