ನನ್ನನ್ನು ಬಾಲಿವುಡ್ ಸೆಲೆಬ್ರಿಟಿ ಅನ್ನಬೇಡಿ: ಪ್ರಿಯಾಂಕಾ ಖಡಕ್ ನುಡಿ

ಪ್ರಿಯಾಂಕಾ ಚೋಪ್ರಾಗೆ ಬಾಲಿವುಡ್ ಸೆಲೆಬ್ರಿಟಿ ಅಂತ ಕರೆಸಿಕೊಳ್ಳುವುದು ಇಷ್ಟವಿಲ್ಲವಂತೆ. ''ನೀವು ಸ್ಪಾನಿಷ್ ಸೆಲೆಬ್ರಿಟಿ...
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾಗೆ ಬಾಲಿವುಡ್ ಸೆಲೆಬ್ರಿಟಿ ಅಂತ ಕರೆಸಿಕೊಳ್ಳುವುದು ಇಷ್ಟವಿಲ್ಲವಂತೆ. ''ನೀವು ಸ್ಪಾನಿಷ್ ಸೆಲೆಬ್ರಿಟಿ, ಇಟಾಲಿಯನ್ ಸೆಲೆಬ್ರಿಟಿ ಅಂತ ಕೇಳಿದ್ದೀರ, ಹಾಗಾದರೆ ಮತ್ಯಾಕೆ ನನ್ನನ್ನು ಬಾಲಿವುಡ್ ಸೆಲೆಬ್ರಿಟಿ ಅಂತ ಕರೀತೀರಿ'' ಅಂತ ಪ್ರಶ್ನೆ ಕೇಳಿದ್ದಾಳಂತೆ.

ಬಾಲಿವುಡ್ ನಲ್ಲಿ ಹೆಸರು ಮಾಡಿರುವ ಪ್ರಿಯಾಂಕಾ ಇತ್ತೀಚೆಗೆ ಹಾಲಿವುಡ್ ಗೂ ಹಾರಿದ್ದು ಅಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಅಮೆರಿಕದ ಟಿವಿ ಸಿರೀಸ್ ಕ್ವಾಂಟಿಕೋದಲ್ಲಿ ನಟಿಸುತ್ತಿದ್ದು, ಅದರ ಜತೆಗೆ ಬೇವಾಚ್ ಎಂಬ ಚಿತ್ರದಲ್ಲಿಯೂ ನಟಿಸುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ತನ್ನನ್ನು ಬಾಲಿವುಡ್ ನಿಂದ ಗುರುತಿಸಿಕೊಳ್ಳಲು ಪ್ರಯತ್ನಿಸುವುದು ಆಕೆಗೆ ಇಷ್ಟ ವಿಲ್ಲದಿರಬಹುದು.

ಹಾಲಿವುಡ್ ಗೆ ಹೋದ ನಂತರ ಪ್ರಿಯಾಂಕಾ ಏಕಾಏಕಿ ಬದಲಾದರೆ ಅನ್ನುವ ಪ್ರಶ್ನೆ ಅಭಿಮಾನಿಗಳದ್ದು. ಆದರೂ ಆಕೆ ಕೇಳಿದ ಪ್ರಶ್ನೆ ಸರಿಯಾಗಿದೆ, ಪ್ರಿಯಾಂಕಾ ಸೆಲೆಬ್ರಿಟಿಯಷ್ಟೆ. ಅಲ್ಲಿ ಬಾಲಿವುಡ್, ಹಾಲಿವುಡ್ ನ ಪ್ರಶ್ನೆ ಬರುವುದಿಲ್ಲ. ಅವರ ಮಾತು ಸರಿಯಾಗಿದೆ ಎಂದು ಹೇಳುವವರು ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com